ಪಂಚಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ ಉಬರಡ್ಕ ದಲ್ಲಿ ಚಾಲನೆ

0

ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ಯುವಕ ಮಂಡಲ ಉಬರಡ್ಕ ಮಿತ್ತೂರು ಇದರ ವತಿಯಿಂದ ಪಂಚಸಪ್ತತಿ ಸ್ವಚ್ಚತಾ ಅಭಿಯಾನ 2025, 75 ದಿನಗಳ ಸ್ವಚ್ಚತಾ ಅಭಿಯಾನದ ಚಾಲನೆಯನ್ನು ಅ11 ರಂದು ಉಬರಡ್ಕದಲ್ಲಿ ಭಾಗದ ರಸ್ತೆಬದಿ ಸ್ವಚ್ಛತೆ ಮಾಡುವ ಮೂಲಕ ನೆರವೇರಿತು,

ಯುವಜನ ಸಂಯುಕ್ತ ಮಂಡಳಿಯ ಗೌರವಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಪುನೀತ್ ಪೈಕ, ಕಾರ್ಯದರ್ಶಿ ಅರ್ಜುನ್ ಉಬರಡ್ಕ, ಗೌರವ ಸಲಹೆಗಾರರಾದ ರಾಜೇಶ್ ರೈ ಉಬರಡ್ಕ, ಗಂಗಾಧರ್ ಭರ್ಜೆರಿಗುಂಡಿ ನಿರ್ದೇಶಕರಾದ ಧನಂಜಯ ಬರ್ಜೆರಿಗುಂಡಿ ಜ್ಞಾನೇಶ್ ಮಾಣಿಬೆಟ್ಟು, ಯತಿಂದ್ರ ಪೈಕ, ಶರತ್ ಉಬರಡ್ಕ, ಶಿವಪ್ರಸಾದ್ ಬಳ್ಳಡ್ಕ, ತೀರ್ಥಕುಮಾರ್ ಬರ್ಜೆರಿಗುಂಡಿ, ಸಂದೀಪ್ ಮುಂಡ್ಯ ರವರು ಭಾಗವಹಿಸಿದರು.