ಚಿನ್ನದ ನಾಣ್ಯ ಬಹುಮಾನ
ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂ..ಕುಂ.. ಫ್ಯಾಷನ್ ನವೀಕರಣಗೊಂಡಿದ್ದು, ಶುಭಾರಂಭ ಕಾರ್ಯಕ್ರಮ ಅ.11ರಂದು ಮುಂಜಾನೆ ನಡೆಯಿತು. ಶುಭಾರಂಭದ ಪ್ರಯುಕ್ತ ಅತಿಥಿಗಳಿಗೆ ಹಾಗೂ ಗ್ರಾಹಕರಿಗೆ ಲಕ್ಕಿಕೂಪನ್ ನೀಡಲಾಗಿತ್ತು.ಇದರ ಡ್ರಾ ಅ.11ರಂದು ರಾತ್ರಿ ನೆರವೇರಿತು.
ಸುಳ್ಯ ದ್ವಾರಕಾ ಹೋಟೆಲ್ ಮಾಲಕ ವಸಂತ ಭಟ್ ಡ್ರಾ ನೆರವೇರಿಸಿದರು. ಅದೃಷ್ಟ ಶಾಲಿಯಾಗಿ ಶಶಿಧರ್ ಕುರುಂಜಿಭಾಗ್ ಆಯ್ಕೆಯಾದರು. ಬಹುಮಾನವಾಗಿ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಲಾಗುತ್ತದೆ.















ಈ ಸಂದರ್ಭದಲ್ಲಿ ರಾಜಶ್ರೀ ಕಾಂಪ್ಲೆಕ್ಸ್ ಮಾಲಕ ಕೃಷ್ಣರಾವ್ ಹಾಗೂ ಸ್ಥಳೀಯ ಅಂಗಡಿಗಳವರು, ಕುಂ..ಕುಂ.. ಸಂಸ್ಥೆ ಪಾಲುದಾರರು, ಸಿಬ್ಬಂದಿಗಳಿದ್ದರು.
ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.










