ಪಥಸ್ಮೃತಿ 33 ರ ಸಂಭ್ರಮದ
ಸ್ಮರಣ ಸಂಚಿಕೆ ಬಿಡುಗಡೆ
ಸುಳ್ಯದ ನೆಹರು ಮೇಮೋರಿಯಲ್ ಕಾಲೇಜಿನ 1990-93 ರ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಹಾಗೂ 33 ವರ್ಷದ ಸಂಭ್ರಮದ ಸವಿ ನೆನಪಿಗಾಗಿ ಪಥ ಸ್ಮೃತಿ ಎಂಬ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಅ. 12 ರಂದು ಸುಳ್ಯದ ಸದರ್ನ್ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಅಧ್ಯಕ್ಷ ರಾದ ಡಾ. ಕೆ. ವಿ. ಚಿದಾನಂದ ರವರು ಅಧ್ಯಕ್ಷತೆ ವಹಿಸಿದ್ದರು. ಎ. ಒ. ಎಲ್. ಇ.ನಿರ್ದೇಶಕರಾದ
ಶ್ರೀಮತಿಶೋಭಾಚಿದಾನಂದ
ರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.










ಅತಿಥಿಗಳಾಗಿ
ಎಸ್. ಡಿ. ಸಿ. ಸಿ ಬ್ಯಾಂಕ್ ನಿರ್ದೇಶಕ ಎಸ್. ಎನ್. ಮನ್ಮಥ, ಸುಳ್ಯ ವರ್ತಕರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಪಿ. ಬಿ. ಸುಧಾಕರ ರೈ,
ಎಂ. ಬಿ ಪೌಂಡೇಶನ್ ಸಂಚಾಲಕರಾದ
ಎಂ. ಬಿ. ಸದಾಶಿವ, ಪ್ರಾಂಶುಪಾಲರಾದ
ಶ್ರೀಮತಿ ಯಶೋಧ ರಾಮಚಂದ್ರ, ಎನ್. ಎಂ. ಸಿ
ಪ್ರಾಂಶುಪಾಲ ರುದ್ರೆ ಕುಮಾರ್, ಕಾರ್ಯಕ್ರಮದ
ಸಂಚಾಲಕ ಲಕ್ಷ್ಮಿ ನಾರಾಯಣ, ಉಪನ್ಯಾಸಕಿ ಶ್ರೀಮತಿ ರತ್ನಾವತಿ ರವರು
ವೇದಿಕೆಯಲ್ಲಿದ್ದರು.
ಸುಭೋದ್ ಶೆಟ್ಟಿ ಮೇನಾಲ ಸ್ವಾಗತಿಸಿದರು.
ಲಕ್ಷ್ಮೀನಾರಾಯಣ ಪ್ರಾಸ್ತಾ ವಿಕವಾಗಿ ಮಾತನಾಡಿದರು.
ಶ್ರೀಮತಿ ಹೇಮಾಗಣೇಶ್ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ವಿದ್ಯಾರ್ಥಿಗಳು ಹಾಗೂ ಬಂಧು ಮಿತ್ರರು ಭಾಗವಹಿಸಿದರು.










