ಗಣಪತಿ ಹವನ ಮತ್ತು ವಿಶೇಷ ಸಂಜೀವಿನಿ ಮೃತ್ಯುಂಜಯ ಹವನ ನಡೆಸುವ ಬಗ್ಗೆ ಚರ್ಚೆ









ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಪದಾಧಿಕಾರಿಗಳ, ಸದಸ್ಯರ ಮತ್ತು ಭಕ್ತಾದಿಗಳ ಸಭೆ ಅ. 11ರಂದು ಅಯ್ಯನಕಟ್ಟೆಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ನಡೆಯಿತು.
ಈ ಹಿಂದೆ ನಡೆದ ಪ್ರಶ್ನಾ ಚಿಂತನೆಯಲ್ಲಿ ಗಣಪತಿಹವನ ಮತ್ತು ವಿಶೇಷ ಸಂಜೀವಿನಿ ಮೃತ್ಯುಂಜಯ ಹವನ ನಡೆಸಬೇಕೆಂದು ಕಂಡುಬಂದಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನವೆಂಬರ್ ತಿಂಗಳಲ್ಲಿ ಕಾರ್ಯಕ್ರಮ ನಡೆಸುವುದೆಂದು ತೀರ್ಮಾನಿಸಲಾಯಿತು. ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಕಿಲಂಗೋಡಿ ಸ್ವಾಗತಿಸಿ, ವಂದಿಸಿದರು. ಸೇವಾ ಸಮಿತಿಯ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ, ಕೋಶಾಧಿಕಾರಿ ಬಿ. ಪ್ರಭಾಕರ ಆಳ್ವ ಬಜನಿಗುತ್ತು, ಸದಸ್ಯರಾದ ರಾಮಪ್ರಸಾದ್ ಕಾಂಚೋಡು, ಎಂ. ಕೂಸಪ್ಪ ಗೌಡ ಮುಗುಪ್ಪು, ಗಂಗಾಧರ ತೋಟದಮೂಲೆ, 2025ರ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಕಾರ್ಯಾಧ್ಯಕ್ಷ ಚಂದ್ರಶೇಖರ ರೈ ಬಜನಿ, ಮಾರ್ಗದರ್ಶಕ ಮಂಡಳಿ ಸದಸ್ಯರಾದ ರುಕ್ಮಯ್ಯ ಗೌಡ ಕಳಂಜ, ಅಚ್ಚುತ ಗೌಡ ಬಾಳಿಲ, ಸಮಿತಿಯ ಸದಸ್ಯರಾದ ಕಿರಣ್ ರೈ ಅಗಲ್ಪಾಡಿ, ಪ್ರೀತೇಶ್ ತಂಟೆಪ್ಪಾಡಿ, ತೀರ್ಥಕುಮಾರ ಮೂರುಕಲ್ಲಡ್ಕ, ರವೀಂದ್ರ ಗೌಡ ಎಂ, ದೀಪಕ್ ಪೂಜಾರಿ ಅಯ್ಯನಕಟ್ಟೆ, ಈಶ್ವರ ವಾರಣಾಶಿ ಸಭೆಯಲ್ಲಿ ಉಪಸ್ಥಿತರಿದ್ದರು.










