ಐವರ್ನಾಡು : ಉಚಿತ ಯೋಗ ಶಿಬಿರ ಸಮಾರೋಪ – ಸನ್ಮಾನ

0

ಇಂದಿರಾ ಹೆಲ್ತ್ ಟ್ರಸ್ಟ್ ಹಾಸನಡ್ಕ , ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಐವರ್ನಾಡು, ಹಾಗೂ ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ ಇದರ ಆಶ್ರಯದಲ್ಲಿ ಅ.6 ರಿಂದ ಅ.12 ರವರೆಗೆ ಜರುಗಿದ ಒಂದು ವಾರಗಳ ಕಾಲ ನಡೆದ ಯೋಗ ಶಿಬಿರ ಅ.12ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಪ್ರತಿದಿನ ಗ್ರಾಮದ ಸುಮಾರು 50ರಿಂದ 60ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಶಿಬಿರದಲ್ಲಿ ಯೋಗ, ಆರೋಗ್ಯ , ಆಹಾರ ಪದ್ಧತಿ, ಸೂರ್ಯ ನಮಸ್ಕಾರ, ಧ್ಯಾನ, ಪ್ರಾಣಾಯಾಮ, ಉಸಿರಾಟದ ಯೋಗಗಳು, ಯೋಗ ನಿದ್ದೆ, ಸೌಂಡ್ ಹೀಲಿಂಗ್, ಹಾಗೂ ಇನ್ನಿತರ ಯೋಗಗಳ ಅಭ್ಯಾಸ ನಡೆಸಲಾಯಿತು.


ಸಮಾರೋಪದಲ್ಲಿ ಡಾ.ಶಶಿಧರ್ ಹಾಸನಡ್ಕ ಇವರು ಯೋಗದ ಬಗ್ಗೆ ಮಾಹಿತಿ ನೀಡಿ ಹಾಗೂ ಹೇಗೆ ಪ್ರತಿದಿನ ಯೋಗಾಭ್ಯಾಸ ಮಾಡಬೇಕು ಮತ್ತು ದೈನಂದಿನ ಆಹಾರ ಕ್ರಮದ ಬಗ್ಗೆ ವಿವರಿಸಿದರು.

ನಂತರ ಎಲ್ಲರು ಶಿಬಿರದಲ್ಲಿ ತಮ್ಮ ಅನಿಸಿಕೆ ಮತ್ತು ಅನುಭವಗಳನ್ನು ಹಂಚಿಕೊಂಡರು.
60ವರ್ಷ ಮೇಲ್ಪಟ್ಟ ಅನೇಕ ಹಿರಿಯರು ಯೋಗ ಶಿಬಿರದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.
ನಂತರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಡಾ. ಶಶಿಧರ್ ಅವರನ್ನು ಗ್ರಾಮದ ಪರವಾಗಿ ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮವನ್ನು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಎನ್. ಮನ್ಮಥ ನಡೆಸಿಕೊಟ್ಟರು.
ವೇದಿಕೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ. ಎಚ್., ಗ್ರಾಮಸ್ಥರಾದ ಶಾಂತಾರಾಮ ಕಣಿಲೆಗುಂಡಿ, ರವಿನಾಥ್ ಮಡ್ತಿಲ, ಗೋಪಾಲಕೃಷ್ಣ ಚೆಮ್ನೂರು, ನಟರಾಜ್ ಸಿ.ಕೂಪ್, ರೋಹಿತ್ ಬಾಂಜಿಕೋಡಿ, ಧರ್ಮಪಾಲ ಲಾವಂತಡ್ಕ, ಭವಾನಿ ಮಡ್ತಿಲ, ವಾಸುದೇವ ಬೊಳುಬೈಲು, ಶೇಖರ ಕೊಯಿಲ, ಉಪಸ್ಥಿತರಿದ್ದರು.
ಹಾಗೂ ಎಲ್ಲಾ ಪುರುಷ ಹಾಗೂ ಮಹಿಳಾ ಯೋಗಾಸಕ್ತರು ಹಾಜರಿದ್ದರು.