ಹಿಂದಿನ ಸಮಿತಿ ಮುಂದುವರಿಕೆ-ನೂತನವಾಗಿ ಕ್ರೀಡಾ, ಸಾಂಸ್ಕೃತಿಕ, ಮಾಧ್ಯಮ ಕಾರ್ಯದರ್ಶಿ ಸ್ಥಾನ ಅಸ್ತಿತ್ವಕ್ಕೆ
ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇದರ ವಾರ್ಷಿಕ ಮಹಾಸಭೆ ಅ. 12 ರಂದು ಅಡ್ತಲೆ ಶಾಲಾ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಿನಯ್ ಬೆದ್ರುಪಣೆ ವಹಿಸಿದ್ದರು. ಕಾರ್ಯದರ್ಶಿ ಸಂತೋಷ್ ಪಿಂಡಿಮನೆ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಸುನಿಲ್ ಅಡ್ತಲೆ ವಾರ್ಷಿಕ ಲೆಕ್ಕಪತ್ರವನ್ನು ಮಂಡನೆ ಮಾಡಿದರು.
ಗೌರವ ಸಲಹೆಗಾರರಾದ ಕೇಶವ ಅಡ್ತಲೆ, ಭವಾನಿ ಶಂಕರ ಅಡ್ತಲೆ, ಹರಿಪ್ರಸಾದ್ ಅಡ್ತಲೆ, ಶಿವರಾಮ ಕಲ್ಲುಗದ್ದೆ ವೇದಿಕೆಯಲ್ಲಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಮುಂದಿನ ಒಂದು ವರ್ಷದ ಅವಧಿಗೆ ಈಗಿರುವ ಸಮಿತಿಯನ್ನೇ ಮುಂದುವರೆಸಲಾಯಿತು. ಅಧ್ಯಕ್ಷರಾಗಿ ವಿನಯ್ ಬೆದ್ರುಪಣೆ, ಉಪಾಧ್ಯಕ್ಷರಾಗಿ ಲೋಹಿತ್ ಮೇಲಡ್ತಲೆ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಪಿಂಡಿಮನೆ, ಖಜಾಂಚಿಯಾಗಿ ಸುನಿಲ್ ಅಡ್ತಲೆ, ಜೊತೆ ಕಾರ್ಯದರ್ಶಿಯಾಗಿ ಕಿಶೋರ್ ಅಡ್ಕ ಪುನರಾಯ್ಕೆಯಾದರು.
















ನೂತನವಾಗಿ ಕ್ರೀಡಾ ಕಾರ್ಯದರ್ಶಿಯಾಗಿ ರತನ್ ಕಿರ್ಲಾಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರವೀಣ್ ಪಾನತ್ತಿಲ ಬೆದ್ರುಪಣೆ, ಮಾಧ್ಯಮ ಕಾರ್ಯದರ್ಶಿಯಾಗಿ ರಂಜಿತ್ ಅಡ್ತಲೆ ಆಯ್ಕೆಗೊಂಡರು.
ನಿರ್ದೇಶಕರಾಗಿ ಚೇತನ್ ಎಂ.ಎ ಬೆದ್ರುಪಣೆ, ಕೇಶವ ಮೇಲಡ್ತಲೆ, ಪ್ರದೀಪ್ ಅಡ್ತಲೆ, ಜೀವನ್ ಪಿಂಡಿಮನೆ, ಸ್ವಾತಿಕ್ ಕಿರ್ಲಾಯ, ಜಗದೀಶ್ ಆಜಡ್ಕ ಕಾಯರ ಆಯ್ಕೆಗೊಂಡರು.
ಸದಸ್ಯರಾಗಿ ದುರ್ಗಾಪ್ರಸಾದ್ ಮೇಲಡ್ತಲೆ, ದಯಾನಂದ ಬಲ್ಕಾಡಿ ಬೆದ್ರುಪಣೆ, ಗಿರೀಶ್ ಅಡ್ಕ, ರಕ್ಷಿತ್ ಚೀಮಾಡು, ನಿತಿನ್ ಕಿರ್ಲಾಯ, ಸುನಿಲ್ ಪಿಂಡಿಮನೆ, ಓಂಪ್ರಸಾದ್ ಪಿಂಡಿಮನೆ, ಅಶೋಕ ಪಾನತ್ತಿಲ ಬೆದ್ರುಪಣೆ, ಗೀತೇಶ್ ಕಾಯರ, ಮನೋಜ್ ಅಡ್ತಲೆ, ಜ್ಞಾನೇಶ್ ಕಾಯರ, ನವರಾಜ್ ಕಿರ್ಲಾಯ, ಸಾತ್ವಿಕ್ ಬೆದ್ರುಪಣೆ, ಲಿಂಗರಾಜ್ ಮೇಲಡ್ತಲೆ ಇವರುಗಳು ಆಯ್ಕೆಗೊಂಡರು.
ಶ್ರವಣ್ ಪಿಂಡಿಮನೆ ಪ್ರಾರ್ಥಿಸಿ, ರತನ್ ಕಿರ್ಲಾಯ ಸ್ವಾಗತಿಸಿ, ಕಿಶೋರ್ ಅಡ್ಕ ಧನ್ಯವಾದಗೈದರು. ರಂಜಿತ್ ಅಡ್ತಲೆ ನಿರ್ವಹಿಸಿದರು.










