ಸರಕಾರಿ ಪ್ರೌಢ ಶಾಲೆ ಎಲಿಮಲೆ, ಇಲ್ಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ವತಿಯಿಂದ , ಸ್ಕೌಟ್ಸ್ ಯುವಧ್ವನಿ ಎನ್ನುವ ಹೊಸ ಕಾರ್ಯಕ್ರಮದ ಅಂಗವಾಗಿ ಅ.12ರಂದು ಶಾಲೆಯ ಕಂಪೌಂಡ್ ಗೋಡೆಗೆ ಸುಣ್ಣ ಬಳೆದು ಸ್ವಚ್ಚಗೊಳಿಸಲಾಯಿತು. ಈ ಸ್ವಚ್ಛತಾ ಕಾರ್ಯಕ್ರಮವು ಶಾಲಾ ಸ್ಕೌಟ್ಸ್ ಮತ್ತು ಗೈಡ್ ನಿರ್ದೇಶಕರಾದ ಮುರಳೀಧರ ಪಿ.ಜೆ ರವರ ನಿರ್ದೇಶನದಂತೆ ನಡೆಸಲಾಯಿತು.
















ಶಾಲಾ ಮುಖ್ಯಗುರುಗಳಾದ ಸಂಧ್ಯಾ ಕೆ.ರವರು ಶುಭಹಾರೈಸಿದರು ಮತ್ತು ಶಾಲಾ ಸ್ಕೌಟ್ ಮಾಸ್ಟರ್ ಭರತ್ ನಾಯಕ್ ರವರು ಈ ಕಾರ್ಯಕ್ರಮದ ಮುಂದಾಳತ್ವವನ್ನು ವಹಿಸಿದರು. ಒಟ್ಟು 56 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.










