ಅಗಲಿದ ಯುವ ಸಂಘಟಕ ನವೀನ್ ಕುಮಾರ್ ಅಲೆಟ್ಟಿ ಯವರಿಗೆ ಶ್ರದ್ದಾಂಜಲಿ – ನುಡಿ ನಮನ

0

ಆಲೆಟ್ಟಿಯ ಪಂಜಿಮಲೆ ನಿವಾಸಿ ದಿ. ಕೃಷ್ಣ ಬಂಟ ರವರ ಪುತ್ರ ನವೀನ್ ಕುಮಾರ್ ಆಲೆಟ್ಟಿ ಯವರು ಅ. 13 ರಂದು ನಿಧಾನರಾಗಿದ್ದು, ಮೃತರ ವೈಕುಂಠ ಸಮಾರಾಧನೆ ಹಾಗೂ ಸಾರ್ವಜನಿಕ ಶ್ರದ್ದಾಂಜಲಿ ಕಾರ್ಯಕ್ರಮ ಅ. 24 ರಂದು ಅಲೆಟ್ಟಿ
ಶ್ರೀ ಸದಾಶಿವ ದೇವಸ್ಥಾನದ ಸಭಾಭಾವನದಲ್ಲಿ ನಡೆಯಿತು.

ಮೃತರ ಕುರಿತು ಅಗ್ರ ಕುಟುಂಬದ ಮುಖ್ಯಸ್ಥರಾದ ಪ್ರಕಾಶ್ ನೈಕ್ ಅಲಿಕೊಡಿ ಹಾಗೂ ಸದಾಶಿವ ದೇವಸ್ಥಾನದ ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಅಲೆಟ್ಟಿ ಯವರು ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ವಿಜಯ ಅಲೆಟ್ಟಿ, ಸಹೋದರರಾದ ಸುಧಾಕರ ಅಲೆಟ್ಟಿ, ಶಿವಪ್ರಸಾದ್ ಅಲೆಟ್ಟಿ, ಸಹೋದರಿಯರಾದ ಶ್ರೀಮತಿ ಸರೋಜಿನಿ ಅಡೂರು, ಶ್ರೀಮತಿ ವನಜಾಕ್ಷಿ ಅಲೆಟ್ಟಿ, ಅಳಿಯಂದಿರು ಹಾಗೂ ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲರೂ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಶ್ರದ್ದಾಂಜಲಿ ಕೋರಿದರು.