ನಾಳೆ(ಅ26):ಕೆಸರು ಗದ್ದೆ ಕ್ರೀಡಾ ಕೂಟ
ಜೇಸಿಐ ಪಂಜ ಪಂಚಶ್ರೀ ಇದರ
ಜೇಸಿ ಸಪ್ತಾಹ-2025 ವಿಜೃಂಭಣೆಯಿಂದ ಅ.26 ರಿಂದ ನ.1 ತನಕ ಘಟಕದ ಅಧ್ಯಕ್ಷ JFM ವಾಚಣ್ಣ ಕೆರೆಮೂಲೆ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಅ.26 ರಂದು ಜೇಸಿ ಸಪ್ತಾಹ ಉದ್ಘಾಟನಾ ಸಮಾರಂಭ ಮತ್ತು ಕೆಸರು ಗದ್ದೆ ಕ್ರೀಡಾಕೂಟ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಪ್ರಾಂತ್ಯ ‘ಎಫ್’ ವಲಯ 15, ವಲಯ ಉಪಾಧ್ಯಕ್ಷ
JFF ಸಂತೋಷ್ ಶೆಟ್ಟಿ ಪೆಲ್ತಡ್ಕ ಉದ್ಘಾಟಿಸಲಿದ್ದಾರೆ.
ಕ್ರೀಡಾ ಸ್ಪರ್ಧೆಗಳು ಪುರುಷರ 470 ಕೆ.ಜಿ.
7ಜನರ ಹೆಸರುಗದ್ದೆ ಹಗ್ಗಜಗ್ಗಾಟ. ಪ್ರಥಮ ರೂ.5025 ಜೇಸಿ ಟ್ರೋಫಿ , ದ್ವಿತೀಯ ರೂ. 3025 ಜೇಸಿ ಟ್ರೋಫಿ , ತೃತೀಯ ರೂ. 2025 ಜೇಸಿ ಟ್ರೋಫಿ, ಚತುರ್ಥ ರೂ1025 ಜೇಸಿ ಟ್ರೋಫಿ,
ಮಹಿಳೆಯರ 7 ಜನರ ಮುತ್ತ ಕೆಸರುಗದ್ದೆ ಹಗ್ಗಜಗ್ಗಾಟ ಪ್ರಥಮ ರೂ 3025 ಜೇಸಿ ಟ್ರೋಫಿ, ದ್ವಿತೀಯ ರೂ.2025 ಜೇಸಿ ಟ್ರೋಫಿ, ತೃತೀಯ ರೂ.750 ಜೇಸಿ ಟ್ರೋಫಿ, ಚತುರ್ಥ ರೂ.500 ಜೇಸಿ ಟ್ರೋಫಿ, ಪುರುಷರ ಆಹ್ವಾನಿತ ತಂಡಗಳ ಕೆಸರುಗದ್ದೆ ವಾಲಿಬಾಲ್ ಪಂದ್ಯಾಟ,
ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ.








ಅ.27 ರಂದು ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜಿನಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ‘ಸರ್ಕಾರಿ ಮತ್ತು ಖಾಸಗಿ ನೇಮಕಾತಿಗಳ’ ತರಬೇತಿ ಕಾರ್ಯಗಾರ.
ಅ.28 ರಂದು ಬಂಟ್ವಾಳ ತಾಲೂಕು ಪೆರುವಾಯಿ ಪಲ್ಲತ್ತಡ್ಕ ಫಾರ್ಮ್ಸ್ ನಲ್ಲಿ ಕೃಷಿ ಕ್ಷೇತ್ರ ವೀಕ್ಷಣೆ ಮತ್ತು ಮಾಹಿತಿ.
ಅ.29 ರಂದು ಪಂಜ ಲಯನ್ಸ್ ಭವನದಲ್ಲಿ ‘ಜೀವನವನ್ನು ಸಂಭ್ರಮಿಸಿ’ ಕೌಟುಂಬಿಕ ತರಬೇತಿ ಕಾರ್ಯಗಾರ.
ಅ.30 ರಂದು ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ
ಆರೋಗ್ಯ ಮಾಹಿತಿ ‘ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ಹಾಗೂ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು
ನ. 1.ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ 9 ರಿಂದ ನಡೆಯಲಿದೆ. ಚಿತ್ರಕಲಾ ಸ್ಪರ್ಧೆ ( ಸುಳ್ಯ ಮತ್ತು ಕಡಬ ತಾಲೂಕಿಗೆ ಒಳಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ). LKG ಯಿಂದ 1ನೇ ತರಗತಿ ಐಚ್ಛಿಕ,2ರಿಂದ 4ನೇ ತರಗತಿ ಐಚ್ಛಿಕ,5ರಿಂದ 7ನೇ ತರಗತಿ ಪ್ರಕೃತಿ ವಿಕೋಪ,8ರಿಂದ 10ನೇ ತರಗತಿ ತಾಯಿ ವಾತ್ಸಲ್ಯ, ಪಿಯುಸಿ ತುಳುನಾಡ ಸಂಸ್ಕೃತಿ ವಿಷಯದಲ್ಲಿ ನಡೆಯಲಿದೆ. ಸಂಜೆ ಗಂಟೆ 6 ರಿಂದ ಸಮಾರೋಪ ಸಮಾರಂಭದಲ್ಲಿ ಘಟಕದ ಪೂರ್ವಾಧ್ಯಕ್ಷ JFM ನಾಗಮಣಿ ಕೆದಿಲ ರವರಿಗೆ ಕಮಲಪತ್ರ ಪುರಸ್ಕಾರ ನಡೆಯಲಿದೆ. ಪಾಂಡಿಗದ್ದೆ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಯಶೋಧರ ಕಳಂಜ ರವರಿಗೆ ಸನ್ಮಾನ ನಡೆಯಲಿದೆ. ಪರಿಸರದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಪಂಚಶ್ರೀ ವಿದ್ಯಾನಿಧಿ ಸಮರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು. ಸುಮಾ ಕೋಟೆ ಇವರಿಂದ ಗಾನ ಸುಧೆ, ಸುಬ್ರಹ್ಮಣ್ಯ ಕೆ.ಎಸ್.ಎಸ್. ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ
ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ










