ಗಣಹವನ, ಸತ್ಯನಾರಾಯಣ ಪೂಜೆ,ಪಾಷಾಣ ಮೂರ್ತಿ, ಮಂತ್ರ ದೇವತೆ ನೇಮೋತ್ಸವ
ಸುಬ್ರಹ್ಮಣ್ಯದ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್,ರೋಟರಿ ಕ್ಲಬ್ ಸುಬ್ರಹ್ಮಣ್ಯ ಹಾಗೂ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸುಬ್ರಹ್ಮಣ್ಯ ಲೀಜನ್ ವತಿಯಿಂದ ಖ್ಯಾತ ಉದ್ಯಮಿ, ಸಮಾಜಸೇವಕ, ಚಲನಚಿತ್ರ ನಟ, ಅಖಿಲ ಭಾರತ ಬಿಲ್ಲವ ಮಹಾಮಂಡಲದ ಮುಲ್ಕಿಯ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್ ಅವರನ್ನು ಸುಬ್ರಹ್ಮಣ್ಯದ ದೋಣಿಮಕ್ಕಿ ಕುಕ್ಕೆ ಶ್ರೀ ನಿಲಯದ ಸಭಾಂಗಣದಲ್ಲಿ ಅ. 24 ಗೌರವಿಸಲಾಯಿತು.








ಡಾ.ರಾಜೇಶ್ ಶೇಖರ ಕೋಟ್ಯಾನ್ ಅವರು ಸಮಾಜಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ ಹಾಗೂ ಚಲನಚಿತ್ರ ರಂಗದಲ್ಲಿ ಸಲ್ಲಿಸಿದ ಸೇವೆ ಮತ್ತು ಬಡವರಿಗಾಗಿ ಸದಾ ದುಡಿಯುತ್ತಿರುವ ಅವರಿಗೆ ಈ ಗೌರವಾರ್ಪಣೆ ಮಾಡಲಾಗಿದೆ ಎಂದು ಈ ಸಂದರ್ಭ ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿಕಕ್ಕೆ ಪದವು ತಿಳಿಸಿದರು. ಇದೇ ದಿನ ರವಿ ಕಕ್ಕೆಪದವು ಅವರ ದೋಣಿಮಕ್ಕಿಯ ಕುಕ್ಕೆ ಶ್ರೀ ನಿಲಯದಲ್ಲಿ ಬೆಳಿಗ್ಗೆ ಗಣ ಹೋಮ ಹಾಗೂ ಮಧ್ಯಾಹ್ನ ಸತ್ಯನಾರಾಯಣ ಪೂಜೆ, ರಾತ್ರಿ ಪಾಷಾಣ ಮೂರ್ತಿ, ಮಂತ್ರದೇವತೆ ದೈವಗಳ ನೇಮೋತ್ಸವ ಕಾರ್ಯಕ್ರಮ ನೆರವೇರಿತು.

ಇದೇ ವೇಳೆ ಬಡವರ ಸೇವೆಯಲ್ಲಿ ಸದಾ ನಿರತರಾಗಿರುವ, ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಹಾಗೂ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿರುವ ಬೆಳ್ತಂಗಡಿ ಮೆಚ್ಚಿನ ದವರಾದ ನೆತ್ತರ ಗೋಪಾಲಕೃಷ್ಣ ಶೆಟ್ಟಿ ಹಾಗೂ ಇಂತದ್ದೇ ಕೆಲಸ ಮಾಡಿ ಚಿರಪರಿಚರಿಚಿರಾಗಿರುವ ಬೆಳ್ತಂಗಡಿ ಕಣಿಯೂರಿನ ಅಶೋಕ ಕುಲಾಲ್ ಅವರುಗಳನ್ನು ಕೂಡ ಅಭಿನಂದಿಸಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಡಾ. ರವಿ ಕಕ್ಕೆ ಪದವು ಅವರ ಧರ್ಮ ಪತ್ನಿ ಗೀತಾರವಿಕಕ್ಕೆ ಪದವು,
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ರೋಟರಿ ಕ್ಲಬ್ ಸುಬ್ರಹ್ಮಣ್ಯದ ಅಧ್ಯಕ್ಷ ಜಯಪ್ರಕಾಶ್, ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲಿಜನ್ ಅಧ್ಯಕ್ಷ ವೆಂಕಟೇಶ ಹೆಚ್ ಎಲ್, ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡು ತೋಟ, ಕಾರ್ಯದರ್ಶಿ ಗೋಪಾಲ್ ಎಣ್ಣೆ ಮಜಲ್, ಸುಬ್ರಹ್ಮಣ್ಯದ ಉದ್ಯಮಿ ಯಜ್ಞೇಶ್ ಆಚಾರ್, ಕಡಬ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಚಂದ್ರಶೇಖರ ನಾಯರ್, ಸೀನಿಯರ್ ಚೇಂಬರ್ ನ ಪ್ರಭಾಕರ ಪಡ್ರೆ, ಲಯನ್ಸ್ ಕ್ಲಬ್ಬಿನ ಮೋಹನ್ ದಾಸ್ ರೈ, ಸುಬ್ರಹ್ಮಣ್ಯ ಸೊಸೈಟಿ ಉಪಾಧ್ಯಕ್ಷ ದುಗ್ಗಪ್ಪ ಅಗ್ರಹಾರ, ಸುರೇಶ್ ಕಕ್ಕೆ ಪದವು, ಪುತ್ತೂರು ಅಕ್ಷಯ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಜಯಂತ ನಡುಬೈಲು, ಮುಲ್ಕಿ ಬಿಲ್ಲವ ಸಂಘದ ಪದಾಧಿಕಾರಿಗಳಾದ ಸಂತೋಷ, ದಿನೇಶ್, ಬಳ್ಪ ದ ಉಮೇಶ್, ಲಕ್ಷ್ಮಣ ಪೂಜಾರಿ, ಪದ್ಮ ಪೂಜಾರಿ, ಮುಂತಾದವರು ಹಾಜರಿದ್ದರು. ವಿಶ್ರಾಂತ ಉಪನ್ಯಾಸಕ ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ರೋಟರಿ ಪೂರ್ವ ಅಧ್ಯಕ್ಷ ಗೋಪಾಲ ಎಣ್ಣೆಮಜಲ್ ಧನ್ಯವಾದ ಸಮರ್ಪಿಸಿದರು.










