ಅಧ್ಯಕ್ಷ : ಸೋಮಶೇಖರ ಕಟ್ಟೆಮನೆ ಪ್ರಧಾನ ಕಾರ್ಯದರ್ಶಿ ಕರುಣಾಕರ ಹಾಸ್ಪಾರೆ
ಸಹಕಾರ ಭಾರತಿ ಸುಳ್ಯ ತಾಲೂಕು ಸಮಿತಿ ಹಾಗೂ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷ ನಿರ್ದೇಶಕರ ಸಭೆಯು ಅ.24 ರಂದು ಬೆಳ್ಳಾರೆ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.















ತಾಲೂಕು ಸಹಕಾರ ಭಾರತಿ ಅಧ್ಯಕ್ಷರಾಗಿ ಸೋಮಶೇಖರ ಕಟ್ಟೆಮನೆ,ಪ್ರಧಾನ ಕಾರ್ಯದರ್ಶಿಯಾಗಿ ಕರುಣಾಕರ ಹಾಸ್ಪಾರೆ ಆಯ್ಕೆಯಾದರು.
ಮಹಿಳಾ ಪ್ರಮುಕ್ ಆಗಿ ಶ್ರೀಮತಿ ಭಾರತಿ ಪುರುಷೋತಮ್ ಉಳುವಾರು, ಮಹಿಳಾ ಸಹಪ್ರಮುಖ್ ಶ್ರೀಮತಿ ಶಕುಂತಳಾ ಪರಮೇಶ್ವರ್ ಕೇವಳ, ಉಪಾಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ಪೆರುವಾಜೆ,ಸದಾನಂದ ಕಾರ್ಜ ಹಾಗೂ ಶ್ರೀಮತಿ ಶರ್ಮಿಳಾ ಬಾಳುಗೋಡು, ಕಾರ್ಯದರ್ಶಿಯಾಗಿ ಡಾ. ಲಕ್ಷ್ಮೀಶ ಕಲ್ಲುಮುಟ್ಲು, ಚಂದ್ರಶೇಖರ ಸುಳ್ಯ, ಹಾಗೂ ಶ್ರೀಮತಿ ಭಾರತಿ ಕಲ್ಲೋಣಿ, ಸದಸ್ಯರಾಗಿ ವಸಂತ ನಡುಬೈಲು, ಜಯಪ್ರಕಾಶ್ ಮೊಗ್ರ, ತಿರುಮಲೇಶ್ವರ ಭಟ್, ದಮಯತಿ, ಹಾಗೂ ಗಣಪತಿ ಭಟ್ ಗೂನಡ್ಕ ಆಯ್ಕೆಯಾದರು.
ಸಹಕಾರ ಭಾರತಿ ತಾಲೂಕು ಸಮಿತಿ ಅಧ್ಯಕ್ಷ ಕೂಸಪ್ಪಗೌಡ ಮುಗುಪ್ಪು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿಯಿಂದ ತಾಲೂಕು ಸಮಿತಿಗೆ ಉಸ್ತುವಾರಿಯಾಗಿ ನಿಯೋಜನೆಗೊಂಡ ಜಿಲ್ಲಾ ಕೋಶಾಧಿಕಾರಿ ಹಾಗೂ ಹಿರಿಯ ಸಹಕಾರಿ ಸುಬ್ರಹ್ಮಣ್ಯ ಭಟ್ ರವರು ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ವಿಮಲಾ ಸೋಮಶೇಖರ್ ಪೈಕ, ಬೆಳ್ಳಾರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.










