ನಾರಾಯಣ ಗೌಡ ಕಜೆಮೂಲೆಯವರಿಗೆ ನುಡಿನಮನ

0

ಅ. 10ರಂದು ನಿಧನರಾದ ಕಳಂಜ ಗ್ರಾಮದ ಕಜೆಮೂಲೆ ದಿ. ಕುಂಞಣ್ಣ ಗೌಡರ ಪುತ್ರ ನಾರಾಯಣ ಗೌಡ ಕಜೆಮೂಲೆಯವರಿಗೆ ನುಡಿನಮನ ಕಾರ್ಯಕ್ರಮ ಅ. 27ರಂದು ಬೆಳ್ಳಾರೆಯ ಜೆ.ಡಿ. ಆಡಿಟೋರಿಯಂ ಪೆರುವಾಜೆಯಲ್ಲಿ ಮೃತರ ವೈಕುಂಠ ಸಮಾರಾಧನೆಯ ಸಂದರ್ಭದಲ್ಲಿ ನಡೆಯಿತು. ನಿವೃತ್ತ ಪ್ರಾಂಶುಪಾಲರಾದ ಡಾ. ನಾರಾಯಣ ಶೇಡಿಕಜೆ ಮೃತರಿಗೆ ನುಡಿನಮನ ಸಲ್ಲಿಸಿದರು.


ಮೃತರ ಸಹೋದರರಾದ ಚಂದ್ರ ಗೌಡ ಕಜೆಮೂಲೆ, ಸುರೇಶ್ ಗೌಡ ಕಜೆಮೂಲೆ, ಮಂಗಳೂರಿನಲ್ಲಿ ನೆಲೆಸಿದ್ದು, ಮಂಗಳೂರು ಮತ್ತು ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅನಂತ ಕುಮಾರ್ ಕಜೆಮೂಲೆ, ಸಹೋದರಿಯರಾದ ಶ್ರೀಮತಿ ರಾಜೀವಿ ಉಮೇಶ್ ಗೌಡ ನಡುತೋಟು ಸುಬ್ರಹ್ಮಣ್ಯ, ಪುತ್ತೂರಿನ ಸಾಲ್ಮರ ಸ.ಹಿ.ಪ್ರಾ. ಶಾಲಾ ಶಿಕ್ಷಕಿ ಶ್ರೀಮತಿ ಚಂದ್ರಾವತಿ ವಸಂತ್ ಬಪ್ಪಳಿಗೆ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.