ಅಜ್ಜಾವರ ವರಮಹಾಲಕ್ಷ್ಮೀ ಪೂಜಾ ಸಮಿತಿ ಮಹಾಸಭೆ

0

ಅಧ್ಯಕ್ಷರಾಗಿ ಲಕ್ಷ್ಮೀ ಪಲ್ಲತ್ತಡ್ಕ ಆಯ್ಕೆ

ಅಜ್ಜಾವರ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಇದರ ವಾರ್ಷಿಕ ಮಹಾಸಭೆಯು ಅ 26ರಂದು ಶಂಕರ ಭಾರತೀ ವೇದಪಾಠಶಾಲೆ ಬಯಂಬು ಅಜ್ಜಾವರದಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವೇದಾವತಿ ಬಾಲಚಂದ್ರ ಅಡ್ಪಂಗಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಕವಿತ ಪುರುಷೋತ್ತಮ ನಾರ್ಕೋಡು ಕರ್ಲಪ್ಪಾಡಿ ವರದಿ ವಾಚಿಸಿದರು. ಕೋಶಾಧಿಕಾರಿ ಸರಸ್ವತಿ ಚಂದ್ರಶೇಖರ ಬೇಲ್ಯ ಲೆಕ್ಕಪತ್ರ ಮಂಡಿಸಿದರು.
2025 -2026ನೇ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಲಕ್ಷ್ಮಿ. ಕೆ. ಪಲ್ಲತ್ತಡ್ಕ, ಉಪಾಧ್ಯಕ್ಷರಾಗಿ ವನಿತ ಸುಬ್ರಹ್ಮಣ್ಯ ಕರ್ಲಪ್ಪಾಾಡಿ, ಕಾರ್ಯದರ್ಶಿಯಾಗಿ ವಿಮಲಾರುಣ ಪಡ್ಡಂಬೈಲು, ಕೋಶಾಧಿಕಾರಿಯಾಗಿ ಮೋಹಿನಿ ಜಯರಾಮ ಬಾಳಿಲ ಅಜ್ಜಾವರ, ಜತೆಕಾರ್ಯದರ್ಶಿಯಾಗಿ ಮೋಹಿನಿ ನಾರಾಯಣ ಅಜ್ಜಾವರ, ಭಜನಾ ಸಂಚಾಲಕರಾಗಿ ವೇದಾವತಿ ಬಾಲಚಂದ್ರ ಅಡ್ಪಂಗಾಯ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಿಷಮರ್ದಿನೀ ದೇವಳದ ಆಡಳಿತ ಮೋಕ್ತೇಸರರಾದ ಬಯಂಬು ಭಾಸ್ಕರ ರಾವ್, ಗೌರವಾಧ್ಯಕ್ಷರಾದ ಕರುಣಾಕರ ಅಡ್ಪಂಗಾಯ,ಸಲಹಾ ಸಮಿತಿ ಸದಸ್ಯರಾದ ಸೀತಾರಾಮ ಶಾಂತಿಮಜಲು, ಬೆಳ್ಯಪ್ಪ ಮುಡೂರು, ಪೂಜಾ ಸಮಿತಿ ಸ್ಥಾಪಕಾಧ್ಯಕ್ಷರಾದ ಜಯಂತಿ ಜನರ್ಧಾನ ಅಜ್ಜಾವರ ಮೊದಲಾದವರು ಉಪಸ್ಥಿತರಿದ್ದರು.

  ರಮ್ಯ ಶಿರಾಜೆ ಪ್ರಾರ್ಥಿಸಿದರು. ವಿಮಲಾರುಣ ಪಡ್ಡಂಬೈಲು ಸ್ವಾಗತಿಸಿದರು. ಧನ್ಯಕುಮಾರಿ ಅತ್ಯಾಡಿ ವಂದಿಸಿದರು. ಲಕ್ಷ್ಮಿ ಪಲ್ಲತಡ್ಕ ಕಾರ್ಯಕ್ರಮ ನಿರೂಪಿಸಿದರು.