ತಾಲೂಕಿನ ಅತೀ ಹೆಚ್ಚು ವಿದ್ಯಾರ್ಥಿಗಳ ಹೊಂದಿರುವ ಶಾಲೆಗೆ ರಸ್ತೆಯದೇ ಸಮಸ್ಯೆ















ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಪೊಳೆಂಜ-ಪಾಂಡಿಗದ್ದೆ ರಸ್ತೆಯ ಮಧ್ಯೆ ಭಾಗ ಮಳೆ ನೀರಿಗೆ ಸಂಪೂರ್ಣ ಕೊಚ್ಚಿ ಹೋಗಿದೆ. ಸುಳ್ಯ ತಾಲೂಕಿನ ಅತೀ ಹೆಚ್ಚು ವಿದ್ಯಾರ್ಥಿಗಳ ಹೊಂದಿರುವ ಪಾಂಡಿಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮತ್ತು ಅನೇಕ ಮನೆಗಳಿಗೆ ಸಂಪರ್ಕಿಸುವ ಏಕೈಕ ರಸ್ತೆಯಿದು. ಈಗ ವಾಹನ ಸಂಚಾರವೇ ಸವಾಲಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಗಮನಕ್ಕೆ ತಂದರೂ ಈ ವರೆಗೂ ಶಾಶ್ವತ ರಸ್ತೆ ನಿರ್ಮಾಣ ಕೆಲಸ ಆಗಿಲ್ಲ.

ವಾರದ ಹಿಂದೆ ರಿಕ್ಷಾವೊಂದು ಈ ಸ್ಥಳದಲ್ಲಿ ಪಲ್ಟಿಯಾಗಿತ್ತು. ಈ ಭಾಗದ ಜನರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದು ಸಂಬಂಧ ಪಟ್ಟ ಜನ ಪ್ರತಿನಿಧಿಗಳು ಮತ್ತು ಇಲಾಖೆಯಲರು ಸ್ಥಳಕ್ಕೆ ಭೇಟಿ ಪರಿಶೀಲಿಸಿ ಸೂಕ್ತ ಅನುದಾನ ಒದಗಿಸಬೇಕು ಎಂದು ರಸ್ತೆಯ ಫಲಾನುಭವಿಗಳು ತಿಳಿಸಿದ್ದಾರೆ











