ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ ಜಿಲ್ಲೆ ಮತ್ತು ರೋಟರಿ ವಿದ್ಯಾಸಂಸ್ಥೆಗಳು ಸುಳ್ಯ ಇದರ ಸಹಯೋಗದೊಂದಿಗೆ ನಡೆದ 2025ನೇ ಸಾಲಿನ ಪದವಿ ಪೂರ್ವ ವಿಭಾಗದ ಬಾಲಕ ಬಾಲಕಿಯರ ಕ್ರೀಡಾಕೂಟ “ರೋಟರಿ ಐಕ್ಯಂ” ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮಿತ್ತಡ್ಕದಲ್ಲಿ ನಡೆಯಿತು.
ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷರಾಗಿರುವ ರೊ. ಡಾ.ರಾಮ್ ಮೋಹನ್ ಕೆ.ಎನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕ್ರೀಡಾಕೂಟದ ಕ್ರೀಡಾಜ್ಯೋತಿಯನ್ನು ರೋಟರಿ ಕಾಲೇಜಿನ ರಾಜ್ಯ ಮಟ್ಟದ ಕ್ರೀಡಾ ಪ್ರತಿಭೆಗಳಾದ, ಹಸ್ತಾ, ಮನ್ವಿತ್, ನಿತೇಶ್, ಪೂರ್ಣಶ್ರೀ, ರಚಿತಾ, ಶ್ರೇಯಸ್, ವರ್ಷಿತಾ ಮತ್ತು ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ ವಿಜೇತೆ ಕು. ಕ್ಷಮಾ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಿಗೆ ಹಸ್ತಾಂತರಿಸುವ ಮೂಲಕ ಕ್ರೀಡಾ ಗೌರವ ವಂದನೆಯನ್ನು ಸಲ್ಲಿಸಿದರು.









ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ದಕ್ಷಿಣ ಕನ್ನಡ ಜಿಲ್ಲೆ ಶಾಲಾ ಶಿಕ್ಷಣ ಪದವಿಪೂರ್ವ ಇಲಾಖೆಯ ಕ್ರೀಡಾ ಸಂಯೋಜಕರಾದ ಪ್ರೇಮ್ ನಾಥ್ ಶೆಟ್ಟಿ, ಅವರು ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ರೋಟರಿ ವಿದ್ಯಾಸಂಸ್ಥೆಗಳು ಸುಳ್ಯ ಇದರ ಸಂಚಾಲಕರಾದ ರೊ. ಪಿ.ಪಿ. ಎಂ.ಪಿಹೆಚ್ಎಫ್ ಪ್ರಭಾಕರನ್ ನಾಯರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ರೋಟರಿ ಕ್ಲಬ್ ನ ಸದಸ್ಯರಾಗಿರುವ ತಾಲೂಕು ಕ್ರೀಡಾ ಸಮಿತಿ 2025ರ ಸಂಚಾಲಕರಾದ ವಸಂತ್ ಎ.ಸಿ, ಸ್ಥಾಪಕಾದ್ಯಕ್ಷರಾದ ರೊ. ರಾಮಚಂದ್ರ ಪಿ, ಸುಳ್ಯ ತಾಲೂಕು ಪದವಿಪೂರ್ವ ಕ್ರೀಡಾ ಸಂಯೋಜಕರಾದ ಶ್ರೀಮತಿ ಶಾಂತಿ ಎ ಕೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿಯರಾದ ಭಾನವಿ, ಯಶಸ್ವಿ ಹಾಗೂ ಅವನಿ ಪ್ರಾರ್ಥನೆ ಗೈದು, ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸ್ವಪ್ನ ಅವರು ಧನ್ಯವಾದ ಗೈದರು. ಕಾಲೇಜಿನ ವಿದ್ಯಾರ್ಥಿನಿಯರ ಸಮೂಹ ನೃತ್ಯ ಮತ್ತು ಕು. ಕ್ಷಮಳ ಯೋಗಾ ಪ್ರದರ್ಶನ ಕ್ರೀಡಾಕೂಟಕ್ಕೆ ಮೆರುಗು ನೀಡಿತು.

ಮುಂಜಾನೆಯ ಮಂಜಿನಲೇ ಆರಂಭಗೊಂಡ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ತಾಲೂಕಿನ ವಿವಿಧ ಕಾಲೇಜಿನ ದೈಹಿಕ ಶಿಕ್ಷಕರು ಸಹಕರಿಸಿದರು. ರೊಟೇರಿಯನ್ ಡಾ. ರಾಮ್ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎನ್.ಎಂ.ಪಿ.ಯು.ಸಿ ಅರಂತೋಡು ಸಮಗ್ರ ಪ್ರಶಸ್ತಿಯನ್ನು ಪಡೆದರೆ ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ಎನ್.ಎಂ.ಪಿ.ಯು.ಸಿ ಸುಳ್ಯ ಪಡೆದು ಕೊಂಡಿದೆ. ಪದವಿಪೂರ್ವ ಬಾಲಕಿಯರ ವಿಭಾಗದಲ್ಲಿ ಎನ್.ಎಂ.ಪಿ.ಯು.ಸಿ ಅರಂತೋಡು ಹಾಗೂ ಬಾಲಕರ ವಿಭಾಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸುಳ್ಯದ ವಿದ್ಯಾರ್ಥಿಗಳು ಚಾಂಪಿಯನ್ಸ್ ಗಳಾಗಿ ಹೊರಹೊಮ್ಮಿದ್ದಾರೆ. ಈ ಕಾರ್ಯಕ್ರಮಕ್ಕೆ ಉಪನ್ಯಾಸಕಿ ಶ್ರೀಮತಿ ಸರಿತಾ.ಕೆ ಇವರು ಸರ್ವರನ್ನೂ ಸ್ವಾಗತಿಸಿದರು.ಉಪನ್ಯಾಸಕರಾದ ಓಮನ್ ದಾಸ್ ಅವರು ಧನ್ಯವಾದ ಗೈದರು.ಉಪನ್ಯಾಸಕಿ ಕು.ದೀಕ್ಷಿತಾ ಕಾರ್ಯಕ್ರಮದ ನಿರೂಪಣೆ ಮಾಡಿದರು.










