ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಇದರ ವತಿಯಿಂದ ನಿವೇದಿತಾ ಜಯಂತಿ ಮತ್ತು ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ

0

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಇದರ ವತಿಯಿಂದ ನಿವೇದಿತಾ ಜಯಂತಿ ಮತ್ತು ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಅ.29 ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷರಾದ ಪುಷ್ಟಮೇದಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ದಮಯಂತಿ ಅಡ್ಕಬಲೆ, ಶ್ರೀಮತಿ ಲಕ್ಷ್ಮಿ ಬಿ. ಎಸ್ ಮಾವಂಜಿ, ಶ್ರೀಮತಿ ಶ್ಯಾಮಲ ಬೊಳ್ಳಾಜೆ, ಶ್ರೀಮತಿ ತೀರ್ಥ ಕುಮಾರಿ ನೆಲ್ಲೂರು ಕೆಮ್ರಾಜೆ ದೀಪ ಬೆಳಗಿಸಿ , ಭಾರತಮಾತೆ ಮತ್ತು ನಿವೇದಿತಾ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಿದರು. ಸಾಮೂಹಿಕ ವಂದೇ ಮಾತರಂ ಗೀತೆ ಹಾಡಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ನಡೆಯಿತು. ವಿಜೇತರಿಗೆ ಪುಸ್ತಕ ನೀಡಿ ಗೌರವಿಸಲಾಯಿತು.

ಸತ್ಯ ವತಿ ಅಡ್ಡನ ಪಾರೆ ಮತ್ತು ಲಕ್ಷ್ಮಿ ವಿ ಶೆಟ್ಟಿ ಸ್ಪರ್ಧೆ ಗಳ ನಿರ್ಣಾಯಕ ರಾಗಿದ್ದರು. ಲೋಲಾಕ್ಷಿ ದಾಸನಕಜೆ ಕಾರ್ಯಕ್ರಮ ನಿರೂಪಿಸಿದರು. ಸುಜಾತ ರೈ ಸ್ವಾಗತಿಸಿ, ವೀಣಾ ಮೋಂಟಡ್ಕ ಧನ್ಯವಾದ ಗೈದರು. ಶಾಂತಿಮಂತ್ರ ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.