ನ. 3 ರಂದು ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗುವ ಸಾಧ್ಯತೆ
ಸುಳ್ಯದಲ್ಲಿ 2012 ರಲ್ಲಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್ ಮತ್ತು ತತ್ವಮಸಿ ಎಂಟರ್ ಪ್ರೈಸೆಸ್ ಎಂಬ ಹೆಸರಿನಡಿಯಲ್ಲಿ ಸ್ಕೀಮ್ ಪ್ರಾರಂಭಿಸಿ ಸಾವಿರಾರು ಜನರಿಗೆ ವಂಚನೆ ಮಾಡಿದ ಆರೋಪದಡಿಯಲ್ಲಿ ಕೇಸು ದಾಖಲಾಗಿದ್ದ 7 ಮಂದಿ
ಅ. 30 ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿದ್ದು ಮೂವರ ಮೇಲೆ ಅಪರಾಧ ಸಾಬೀತಾ ಗಿದ್ದು, ಉಳಿದ 4 ಮಂದಿ ದೋಷ ಮುಕ್ತರಾಗಿ ಖುಲಾಸೆ ಹೊಂದಿರುವುದಾಗಿ ತಿಳಿದು ಬಂದಿದೆ.















ಸ್ಕೀಮ್ ನಡೆಸಿ ಸುಮಾರು ಸಾವಿರಾರು ಗ್ರಾಹಕರಿಗೆ ವಂಚಿಸಿ ಪಂಗ ನಾಮ ಹಾಕಿ ಪರಾರಿಯಾಗಿದ್ದವರ ಟ್ರಸ್ಟಿನ ಸದಸ್ಯರ ಮೇಲೆ ಗ್ರಾಹಕರು ಕೇಸು ದಾಖಲಿಸಿದ್ದರು.
ಈ ಪ್ರಕರಣದ ಕುರಿತು ನ್ಯಾಯಾಧೀಶರು ವಿಚಾರಣೆ ನಡೆಸಿ ಕೋಟ್ಯಾಂತರ ರೂಪಾಯಿ ವಂಚಿಸಿರುವ ಬಗ್ಗೆ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಟ್ರಸ್ಟ್ ಸದಸ್ಯರ ಪೈಕಿ ಗಣೇಶ್ ಕೆ. ಎಸ್, ಗೀತಾ, ಭಾರತಿ ಪ್ರಕಾಶ್ ರವರ ಮೇಲೆ ಅಪರಾಧ ಸಾಬೀತಾಗಿದ್ದು ಆರೋಪಿಗಳೆಂದು ಪರಿಗಣಿಸಲಾಗಿದ್ದು ನ. 3 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾ ಧೀಶರು ಆದೇಶಿಸಿದ್ದು ಆರೋಪಿಗಳಿಗೆ ಬಹುತೇಕ ಶಿಕ್ಷೆ ಪ್ರಕಟಗೊಳ್ಳುವ ಸಾಧ್ಯತೆ ಇರುವುದಾಗಿತಿಳಿದುಬಂದಿದೆ.
ಉಳಿದ 4 ಮಂದಿಯ ಪೈಕಿ ಕೃಷ್ಣಪ್ಪ ಗೌಡ, ಗೀತಾ ಗಣೇಶ್, ಕಮಲಾಕ್ಷ, ನಾಗೇಶ್ ರವರನ್ನು ವಿಚಾರಣೆ ನಡೆಸಿ ಆರೋಪಿ ಸ್ಥಾನದಿಂದಖುಲಾಸೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.










