














ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರಂತೋಡು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಶಶಿಕುಮಾರ್ ಉಳುವಾರು ಅಡ್ತಲೆಯವರು ಮುಂದಿನ ಅವಧಿಗೂ ಅಧ್ಯಕ್ಷರಾಗಿ ಮರು ಆಯ್ಕೆಗೊಂಡಿದ್ದಾರೆ. ಇವರೊಂದಿಗೆ ಅರಂತೋಡು ಗ್ರಾಮದಿಂದ ಯಶೋದರ ಪಿಂಗಾರತೋಟ, ಯು. ಎಂ. ಕಿಶೋರ್ ಕುಮಾರ್ ಉಳುವಾರು, ಮೋಹನ್ ಕುಮಾರ್ ಪಾರೇಮಜಲು, ತೋಡಿಕಾನ ಗ್ರಾಮದಿಂದ ಕೇಶವ ಕೊಳಲುಮೂಲೆ, ವೆಂಕಟ್ರಮಣ ಪೆತ್ತಾಜೆ ಮತ್ತು ಕಮಲಾಕ್ಷ ಕಾಟೂರು (ಪಡ್ಪು )ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.










