ಎಲಿಮಲೆ: ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ, ಅಖಿಲ ಕರ್ನಾಟಕ ತಾಲೂಕು ಜನಜಾಗೃತಿ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢ ಶಾಲೆ ಎಲಿಮಲೆ ಇಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮಾಹಿತಿ ನಡೆಯಿತು.

ಈ ಕಾಯ೯ಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ ದೀಪಪ್ರಜ್ವಲನೆ ಮಾಡಿ ಶಾಲಾ ಮಕ್ಕಳು ದುಶ್ಚಟಗಳಿಂದ ದೂರವಿದ್ದು ಶಾಲಾ ಚಟುವಟಿಕೆ ಹಾಗೂ ತಮ್ಮ ನಡವಳಿಕೆಯನ್ನು ಹಿರಿಯರಿಗೆ ಗೌರವ ಕೊಡುವುದು ಹಾಗೂ ಇನ್ನಿತರ ಉತ್ತಮ ಕೆಲಸಗಳನ್ನು ನಿರ್ವಹಿಸಿ ಕೀರ್ತಿವಂತರಾಗಿ ಎಂದು ಶುಭ ಹಾರೈಸಿದರು.

ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮಹತ್ವವನ್ನು ತರಬೇತುದಾರರಾದ ಲೋಕೇಶ ಪೀರನ ಮನೆಯವರು ಆರೋಗ್ಯದ ಬಗ್ಗೆ ಹಾಗೂ ದುಶ್ಚಟದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಶಾಲಾ ಶಿಕ್ಷಣದ ಜೊತೆಯಲ್ಲಿ ಜೀವನ ಶಿಕ್ಷಣವೂ ಬೇಕು ಎಂದು ತಿಳಿಸಿದರು. ಸಂಸ್ಕಾರ ಮತ್ತು ಪೋಷಕರು ಮತ್ತು ವಿದ್ಯಾರ್ಥಿ ವೃಂದ ಉತ್ತಮ ಸಮಾಜಕ್ಕಾಗಿ ದುಶ್ಚಟ ದುರಾಭ್ಯಾಸದಿಂದ ಮುಕ್ತರಾಗಿ ಶಾಲಾ ಮಕ್ಕಳು ಸತ್ ಪ್ರಜೆಯಾಗಿ ಬೆಳೆಯಲಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಸುಳ್ಳಿ ಯವರು ವಹಿಸಿದ್ದರು.

ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡ ರವರು ದುಶ್ಚಟಾಗಳಿಂದ ಆಗುವ ದುಷ್ಟರಿಣಾಮಗಳ ಬಗ್ಗೆ ಹಾಗೂ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.

ಶಾಲಾ ಮುಖ್ಯೋಪಾಧ್ಯಾಪಕರಾದ ಶ್ರೀಮತಿ ಸಂಧ್ಯಾ. ಕೆ ಯವರು ಯೋಜನೆಯಿಂದ ದೊರೆತ ಸೌಲಭ್ಯಗಳ ಬಗ್ಗೆ ಹಾಗೂ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದಿಂದ ಮಕ್ಕಳಿಗೆ ಜೀವನ ಶಿಕ್ಷಣ ದೊರೆಯುತ್ತದೆ ಎಂದು ತಿಳಿಸಿದರು.
ಶಾಲಾ ಶಿಕ್ಷಕಿಯವರಾದ ಸಂಗೀತರವರು ಸ್ವಾಗತಿಸಿ, ಶಾಲಾ ಶಿಕ್ಷಕಿಯವರಾದ ಜನನಿ ಕೆ. ರವರು ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಗುತ್ತಿಗಾರು ವಲಯದ ಮೇಲ್ವಿಚಾರಕರಾದ ರಾಜೇಶ್. ಪಿ ರವರು ನೆರವೇರಿಸಿಕೊಟ್ಟರು. ಒಕ್ಕೂಟದ ಅಧ್ಯಕ್ಷರಾದ ಬಾನುಪ್ರಕಾಶ್ ತಳೂರ್ ರವರು ಹಾಗೂ ಸೇವಾಪ್ರತಿನಿಧಿ ಉಷಾಲತಾರವರು ಉಪಸ್ಥಿತರಿದ್ದರು.