ಡಾl ರವಿಕಕ್ಕೆ ಪದವು ಅವರಿಗೆ ಸೀನಿಯರ್ ಚೇಂಬರ್ ನಿಕಟಪೂರ್ವ ರಾಷ್ಟ್ರಧ್ಯಕ್ಷರಿಂದ ಎಕ್ಸಲೆನ್ಸ್ ಅವಾರ್ಡ್

0

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ನ ನಿಕಟ ಪೂರ್ವ ಅಧ್ಯಕ್ಷರಾದ ಡಾl ರವಿ ಕಕ್ಕೆ ಪದವು ಅವರಿಗೆ ನಿಕಟ ಪೂರ್ವ ರಾಷ್ಟ್ರ ಅಧ್ಯಕ್ಷ ಚಿತ್ರ ಕುಮಾರ್ ಅವರು ಸುಬ್ರಹ್ಮಣ್ಯದಲ್ಲಿ ಎಕ್ಸಲೆನ್ಸ್ ಅವಾರ್ಡ್ ನೀಡಿ ಗೌರವಿಸಿದರು.

ಡಾ.ರವಿ ಕಕ್ಕೆ ಪದವು ಅವರು ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬಡವರಿಗೆ ಹಾಗೂ ಸೂರು ಇಲ್ಲದವರಿಗೆ ಮನೆ ಶೌಚಾಲಯ ನಿರ್ಮಿಸಿ ಕೊಟ್ಟವರು. ಅಲ್ಲದೆ ಅಕ್ಕಿ, ವಸ್ತ್ರದಾನ, ಇನ್ನಿತರ ದವಸ ಧಾನ್ಯಗಳನ್ನ ದಾನವಾಗಿ ನೀಡುತ್ತಾ ಬಂದವರು. ಹಾಗೆ ಕುಕ್ಕೆ ಸುಬ್ರಹ್ಮಣ್ಯದ ಪವಿತ್ರ ಕ್ಷೇತ್ರದಲ್ಲಿ ಪ್ರತಿ ರವಿವಾರ ಸ್ವಚ್ಛತಾ ಕಾರ್ಯಕ್ರಮವನ್ನು ತನ್ನೆಲ್ಲ ಸಮಾಜ ಸೇವ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ನ ಸದಸ್ಯರ ನಿರಂತರವಾಗಿ ಮಾಡುತ್ತಾ ಬಂಧುದನ್ನ ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಅಧ್ಯಕ್ಷ ವೆಂಕಟೇಶ್ ಎಚ್ ಎಲ್, ಕಾರ್ಯದರ್ಶಿ ಗೋಪಾಲ ಎಣ್ಣೆಮಜಲ್, ಕೋಶಾಧಿಕಾರಿ ಮೋನಪ್ಪ ಡಿ, ನಿರ್ದೇಶಕರುಗಳಾದ ಪ್ರಕಾಶ್ ಕಟ್ಟೆಮನೆ, ಚಂದ್ರಶೇಖರ ನಾಯರ್, ಮಾಧವ ದೇವರ ಗದ್ದೆ,ಅಶೋಕ್ ಕುಮಾರ್ ಮೂಲೆ ಮಜಲು,ದೀಪಕ್ ನಂಬಿಯಾರ್ ಮುಂತಾದವರು ಉಪಸ್ಥಿತರಿದ್ದರು.