ನಿರಂತರ ಒಂದು ತಿಂಗಳು ನಡೆಯುವ ಕಾಯರ್ತೋಡಿ ದೀಪೋತ್ಸವ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ನಿರಂತರ ಭಜನಾ ಕಾರ್ಯಕ್ರಮ, ದೀಪೋತ್ಸವ, ಮಹಾಪೂಜೆ, ನಂತರ ಪ್ರಸಾದ ವಿತರಣೆ ನಡೆಯುತ್ತದೆ.









ನಂತರ ಉಪಾಹಾರದ ವ್ಯವಸ್ಥೆ ಇದ್ದು, ಇದಕ್ಕೆ ದಾನಿಗಳು ನೀಡಿ ಸಹಕಾರ ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಸುಬ್ರಹ್ಮಣ್ಯ ದೇವಾಲಯದಿಂದ ಆಕ್ಕಿ, ವಗೈರೆ ವಸ್ತುಗಳನ್ನು ತರಲು ಬೇಕಾದ ವ್ಯವಸ್ಥೆ ಮಾಡಿದರು. ಸೇವಾ ಸಮಿತಿ ಸಂಚಾಲಕ ಕಿಶೋರ್ ಕಾಯರ್ತೋಡಿ ಸಹಸಂಚಾಲಕಿ ವಿಜಯ, ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.











