ನ.20ರಂದು ಜಾಲ್ಸೂರಿನಲ್ಲಿ 72 ನೇ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹ : ಆಮಂತ್ರಣ ‌ಬಿಡುಗಡೆ

0

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿ., ಮಂಗಳೂರು ಸುಳ್ಯ ತಾಲೂಕು ಸಹಕಾರಿ ಯೂನಿಯನ್ ನಿ ಸುಳ್ಯ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ
ಇತರ ಸಹಕಾರ ಸಂಘಗಳ ಸಹಕಾರದೊಂದಿಗೆ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಜಾಲ್ಲೂರು ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ
ಅಖಿಲ ಭಾರತ ಸಹಕಾರ ಸಪ್ತಾಹ ನ.20ರಂದು ಜಾಲ್ಸೂರು ವಿನೋಬಾನಗರ ವಿವೇಕಾನಂದ ವಿದ್ಯಾಸಂಸ್ಥೆಗಳ‌ ವಠಾರದಲ್ಲಿ ನಡೆಯಲಿದೆ.

ಇದರ ಆಮಂತ್ರಣ ಬಿಡುಗಡೆಯು ಅ.31ರಂದು ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.

ಅಡ್ಕಾರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರ್, ಮೊಕ್ತೇಸರರಾದ ಗುರುರಾಜ್ ಭಟ್, ಅರ್ಚಕ ಸತ್ಯೇಶ್, ಕನಕಮಜಲು ಸಹಕಾರ ಸಂಘದ ಉಪಾಧ್ಯಕ್ಷ ವೆಂಕಪ್ಪ ನಾಯ್ಕ ದೇರ್ಕಜೆ, ನಿರ್ದೇಶಕರಾದ ಗಂಗಾಧರ ಕಾಳಮ್ಮನೆ, ತಿಲೋತ್ತಮ ಕೊಲ್ಲಂತಡ್ಕ, ಕುಸುಮಾಧರ ಅರ್ಭಡ್ಕ, ನಿರಂಜನ ಬೊಳುಬೈಲು, ಸುನಿಲ್ ಅಕ್ಕಿಮಲೆ, ಸಂದೀಪ್ ಕದಿಕಡ್ಕ, ದಮಯಂತಿ ಲಿಂಗಪ್ಪ ಗೌಡ ಅಡ್ಕಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುದ್ಕುಳಿ ಉಪಸ್ಥಿತರಿದ್ದರು.