ಕೆಎಸ್‌ಎಲ್‌ಯು ಅಂತರ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆ – 2025 – 26, ಕೆವಿಜಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗಿ

0

ಡಾ. ಜಿ.ಬಿ.ಎಂ. ಪಾಟೀಲ ಕಾನೂನು ಕಾಲೇಜು ಧಾರವಾಡ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU), ಹುಬ್ಬಳ್ಳಿ ಸಹಯೋಗದಲ್ಲಿ 27ರ ಅಕ್ಟೋಬರ್ 2025 ರಂದು ಧಾರವಾಡದ ಕೆ.ಪಿ.ಇ.ಎಸ್. ಡಾ. ಜಿ. ಬಿ. ಎಂ. ಪಾಟೀಲ ಕಾನೂನು ಕಾಲೇಜಿನಲ್ಲಿ ಕೆಎಸ್‌ಎಲ್‌ಯು ಅಂತರ್ ಕಾಲೇಜು ಪುರುಷ ಮತ್ತು ಮಹಿಳಾ ಗುಡ್ಡಗಾಡು ಓಟ ಸ್ಪರ್ಧೆ ಹಾಗೂ ಆಯ್ಕೆ ಪ್ರಕ್ರಿಯೆ- 2025-26 ಆಯೋಜಿಸಲಾಯಿತು.

ಕೆ.ವಿ.ಜಿ. ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಶ್ಲಾಘನೀಯ ಪ್ರದರ್ಶನ ನೀಡಿ ಗಣನೀಯ ಸ್ಥಾನಗಳನ್ನು ಪಡೆದಿರುತ್ತಾರೆ. ಪುರುಷ ವಿಭಾಗದಲ್ಲಿ ವಿದ್ಯಾರ್ಥಿ ಗಳಾದ ಉಮರ್ ಮುಖ್ತಾರ್, ಹೇಮಂತ್ ಸೋಮಯ್ಯ ಸಿ.ಜೆ, ಕಾರ್ತಿಕ್ ಪಿ.ಬಿ, ಸಚಿನ್ ರೈ ಪಿ, ರಕ್ಷಿತ್ ಕುಮಾರ್ ಐ.ಪಿ, ಮಹಿಳಾ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಶರಣ್ಯ ಎಮ್.ವಿ, ವಿದ್ಯಾಶ್ರೀ ರೈ, ಪೂಜಾ ಏ.ಸಿ ಹಾಗೂ
ಕವನಾ ರೈ ಭಾಗವಹಿಸಿರುತ್ತಾರೆ.


ಕೆ.ವಿ.ಜಿ. ಕಾನೂನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಕಾಲೇಜಿನ ಆಡಳಿತ ಮಂಡಳಿ, ಪ್ರಾoಶುಪಾಲರು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಎಲ್ಲಾ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.