ಸುಳ್ಯದ ಹೋಟೆಲ್ ಲಕ್ಷ್ಮೀ ವಿಲಾಸ್ ನಲ್ಲಿ 12 ನೇ ವರ್ಷದ ಅಂಗವಾಗಿ ಲಕ್ಷ್ಮೀ ಪೂಜೆ

0

ಗ್ರಾಹಕರಿಗೆ ಉಚಿತವಾಗಿ ಉಪಹಾರ ಮಧ್ಯಾಹ್ನ ಊಟದ ವ್ಯವಸ್ಥೆ

ಸುಳ್ಯದ ಕೆ.ಎಸ್.ಆ‌ರ್.ಟಿ.ಸಿ. ಬಸ್ ನಿಲ್ದಾಣದ ಎದುರಿನ ಲಕ್ಷ್ಮೀ ವಿಲಾಸ್ ಹೋಟೆಲ್ ನಲ್ಲಿ 12 ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಲಕ್ಷ್ಮೀ ಪೂಜೆ ಅ.31ರಂದು ನಡೆಯಿತು.

ಬೆಳಗ್ಗೆ ಲಕ್ಷ್ಮೀ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು.


ನೂರಾರು ಗ್ರಾಹಕರು ಆಗಮಿಸಿದ್ದು ಉಚಿತವಾಗಿ ಬೆಳಗ್ಗೆ ಫಲಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸಂಸ್ಥೆ ಮಾಲಕ ಲಕ್ಷ್ಮೀಶ್ ಎನ್ ಚೊಕ್ಕಾಡಿ , ರುಕ್ಮಯ್ಯ ಗೌಡ , ಪತ್ನಿ ಸೀತಾ ಲಕ್ಷ್ಮಿ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.