ಸಂಪಾಜೆ ಗ್ರಾ. ಪಂ ವತಿಯಿಂದ ಸಹಾಯಧನ ಹಸ್ತಾಂತರ

0

ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಕಲ್ಲುಗುಂಡಿ ಸವರೇಪುರ ಕಿರಿಪುಷ್ಪ ಶಾಲಾ ವತಿಯಿಂದ ನಡೆದ ಕ್ರೀಡಾಕೂಟಕ್ಕೆ ಸಹಾಯಧನದ ಚೆಕ್ಕನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಗಾ ಡಿಸೋಜ ಚರ್ಚ್ ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು .

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಜಿ ಕೆ ಹಮೀದ್ ಗೂನಡ್ಕ ,ಸುಂದರಿ ಮುಂಡಡ್ಕ ಸದಸ್ಯರಾದ ವಿಮಲಾ ಪ್ರಸಾದ್ ಲಿಸ್ಸಿ ಮೊನಾಲಿಸಾ , ಆಶಾ ವಿನಯ್, ಕಾರ್ಯದರ್ಶಿ ತಿರುಮಲೇಶ್ವರ ಮೊದಲಾದವರು ಉಪಸ್ಥಿತರಿದ್ದರು.