ಡಾ.ರೇಣುಕಾ ಪ್ರಸಾದ್ ರವರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಬೆಳ್ಳಿರಥ ಸಮರ್ಪಣೆ

0

ಬೆಳ್ಳಿರಥದ ಸ್ವಾಗತಕ್ಕೆ ಕನಕಮಜಲಿನಲ್ಲಿ ಪೂರ್ವಭಾವಿ ಸಭೆ

ಪ್ರಸಿದ್ಧ ಪುಣ್ಯಕ್ಷೇತ್ರವಾದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಅಮರಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡರವರ ಪುತ್ರ ಡಾ.ರೇಣುಕಾ ಪ್ರಸಾದ್ ಕೆ.ವಿ.ಮತ್ತು ಮನೆಯವರು ಬೆಳ್ಳಿರಥ ಸಮರ್ಪಣೆ ಮಾಡಲಿದ್ದು, ರಥವು ಸಾಗಿಬರುವ ರಸ್ತೆಯ
ಕನಕಮಜಲು ಪೇಟೆಯಲ್ಲಿ ಅದ್ದೂರಿ ಸ್ವಾಗತ ಮಾಡುವ ಬಗ್ಗೆ ಪೂರ್ವಭಾವಿ ಸಭೆ ಅ. 31 ರಂದು
ಕನಕಮಜಲಿನ ಶ್ರೀ ಆತ್ಮರಾಮ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ರಥವು ನ.4 ರಂದು ಕೋಟೇಶ್ವರದಿಂದ ಹೊರಟು ಮಂಗಳೂರು, ಪುತ್ತೂರು ಆಗಿ ಕನಕಮಜಲಿಗೆ ಸಂಜೆ 6.00 ಕ್ಕೆ ತಲುಪಲಿದೆ.

ಪೂರ್ವಭಾವಿ ಸಭೆಗೆ ಆಗಮಿಸಿದ ರಥ ಸಮರ್ಪಣಾ ಸಮಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ಪಿ. ಎಸ್. ಗಂಗಾಧರ, ದಿನೇಶ್ ಮಡಪ್ಪಾಡಿ, ದೊಡ್ಡಣ್ಣ ಬರೆಮೇಲುರವರು ರಥ ನಿರ್ಮಾಣವಾದ ಕೋಟೇಶ್ವರದಿಂದ ಹೊರಡುವಲ್ಲಿಂದ ಸುಬ್ರಹ್ಮಣ್ಯದಲ್ಲಿ ಸಮರ್ಪಣೆಗೊಳ್ಳುವವರೆಗಿನ ಮಾಹಿತಿಯನ್ನು ನೀಡಿದರು. ರಥ ಸಂಚರಿಸುವ ರಸ್ತೆಯ ಅಲ್ಲಲ್ಲಿ ರಥವನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡು ಸ್ವಾಗತ ಕೋರಿ ಈ ಪುಣ್ಯಪ್ರದವಾದ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ವಿನಂತಿಸಿದರು.

ಕಮಲಾಕ್ಷ ನಂಗಾರು, ನಾರಾಯಣ ಬೊಮ್ಮೆಟ್ಟಿ, ಲಕ್ಷ್ಮೀನಾರಾಯಣ ಸಾರಕೂಟೇಲ್, ವಸಂತ ಮಳಿ,
ಕೆ.ಬಿ ರಾಮಚಂದ್ರ ಬುಡ್ಲೆಗುತ್ತು, ತಿಲೋತ್ತಮ ಕೊಲ್ಲoತಡ್ಕ, ಐ. ಕೆ. ಹೇಮಚಂದ್ರ, ಗಣೇಶ್ ಕುದ್ಕುಳಿ ಸೇರಿದಂತೆ ಅನೇಕರು
ಉಪಸ್ಥಿತರಿದ್ದರು.

ಈಶ್ವರ್ ಕೊರಂಬಡ್ಕ ಸ್ವಾಗತಿಸಿ,
ತೀರ್ಥರಾಮ ಕಣಜಾಲು ವಂದಿಸಿದರು.