ನಾಗಮಣಿ ಕೆದಿಲ ರವರಿಗೆ ಕಮಲಪತ್ರ ಪುರಸ್ಕಾರ
ಶಿಸ್ತು ಮತ್ತು ಚೌಕಟ್ಟಿನಲ್ಲಿ ಜೇಸಿಐ ಪಂಜ ಪಂಚಶ್ರೀ ಬೆಳೆದಿದೆ : ರಾಕೇಶ್ ರೈ ಕೆಡೆಂಜಿ
ವಿಶ್ವ ಶಾಂತಿಗಾಗಿ ಜೇಸಿ: ಪುರಂದರ ರೈ

ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ-2025 ಸಮಾರೋಪ ಸಮಾರಂಭ ನ.1 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು. ಘಟಕದ ಅಧ್ಯಕ್ಷ JFM ವಾಚಣ್ಣ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಿದ್ದರು. ಜೇಸಿಐ ಭಾರತ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ JC ಪುರಂದರ ರೈ ಕಮಲ ಪತ್ರ ಪುರಸ್ಕರಿಸಿ ಮಾತನಾಡಿ ‘”ವ್ಯಕ್ತಿತ್ವ ವಿಕಸನ ನಡೆದು ವಿಶ್ವ ಶಾಂತಿಯ ಉದ್ದೇಶಕ್ಕಾಗಿ ಜೇಸಿ. ಯುವ ಜನರು ಜೇಸಿ ಸದಸ್ಯರಾಗಿ ಜೇಸಿಯಲ್ಲಿ ಪಾಲ್ಗೊಳ್ಳಿ ” ಎಂದು ಅವರು ಹೇಳಿದರು.
ಪೂರ್ವಾಧ್ಯಕ್ಷ JFM ನಾಗಮಣಿ ಕೆದಿಲ ರವರಿಗೆ ಕಮಲಪತ್ರ ಪುರಸ್ಕಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಪಂಜ ಪೂರ್ವ ವಲಯಾಧಿಕಾರಿ JC ರಾಕೇಶ್ ರೈ ಕೆಡೆಂಜಿ ಮಾತನಾಡಿ “ಜೇಸಿಐ ಪಂಜ ಪಂಚಶ್ರೀ ವ್ಯಕ್ತಿತ್ವ ವಿಕಸನ ಮೂಲಕ ಅನೇಕ ನಾಯಕರನ್ನು ಸಮಾಜಕ್ಕೆ ನೀಡಿದೆ. ಅತ್ಯಂತ ಶಿಸ್ತು ಮತ್ತು ಚೌಕಟ್ಟಿನಲ್ಲಿ ಮತ್ತು ಸಾಮಾಜಿಕ ಸೇವೆಗಳನ್ನು ನೀಡುತ್ತಾ ಬೆಳೆದಿರುವ ಘಟಕವಿದು”. ಎಂದು ಅವರು ಹೇಳಿದರು.
















ಪಾಂಡಿಗದ್ದೆ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಯಶೋಧರ ಕಳಂಜ ಮತ್ತು ಉದಯೋನ್ಮುಖ ಗಾಯಕಿ ಕು.ಸುಮಾ ಕೋಟೆ ರವರಿಗೆ ಸನ್ಮಾನಿಸಲಾಯಿತು. ವಲಯಾಧಿಕಾರಿ JFD ಲೋಕೇಶ್ ಆಕ್ರಿಕಟ್ಟೆ, ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ JFM ದೇವಿಪ್ರಸಾದ್ ಜಾಕೆ,ನಿಕಟಪೂರ್ವಾಧ್ಯಕ್ಷ JFM ಜೀವನ್ ಮಲ್ಕಜೆ, ಕಾರ್ಯದರ್ಶಿ JFM ಅಶ್ವಥ್ ಬಾಬ್ಲುಬೆಟ್ಟು, ಸಪ್ತಾಹ ನಿರ್ದೇಶಕ JFM ದೇವಿ ಪ್ರಸಾದ್ ಚಿಕ್ಮುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಿಸರದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಪಂಚಶ್ರೀ ವಿದ್ಯಾನಿಧಿ ಸಮರ್ಪಣೆ ನಡೆಯಿತು. ಜಯಶ್ರೀ, ಸಿಂಚನ ಕಲ್ಮಡ್ಕ , ಜನನಿ ಕೆರೆಮೂಲೆ ವಿದ್ಯಾನಿಧಿ ಸ್ವೀಕರಿಸಿದರು. ಸಜನ್ ಕುಮಾರ್, ಸಾಕೀರ್ ವಿದ್ಯಾರ್ಥಿ ವೇತನ ಸ್ವೀಕರಿಸಿದರು. ಘಟಕದ ಪೂರ್ವಾಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಜಯರಾಮ ಕಲ್ಲಾಜೆ ವೇದಿಕೆಗೆ ಆಹ್ವಾನಿಸಿದರು. ವಾಚಣ್ಣ ಕೆರೆಮೂಲೆ ಸ್ವಾಗತಿಸಿದರು. ಕಾರ್ತಿಕ್ ಐ ಬಿ ಜೇಸಿ ವಾಣಿ ವಾಚಿಸಿದರು. ಅಶೋಕ್ ಕುಮಾರ್ ನಿಡುಬೆ, ಗಗನ್ ಕಿನ್ನಿಕುಮೇರಿ, ಜೀವನ್ ಶೆಟ್ಟಿಗೆದ್ದೆ , ಕೌಶಿಕ್ ಕುಳ ಸನ್ಮಾನಿತರ , ಅತಿಥಿಗಳ ಪರಿಚಾಯಿಸಿದರು. ಅಶ್ವಥ್ ಬಾಬ್ಲುಬೆಟ್ಟು ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು. ಸುಮಾ ಕೋಟೆ ಇವರಿಂದ ಗಾನ ಸುಧೆ, ಸುಬ್ರಹ್ಮಣ್ಯ ಕೆ.ಎಸ್.ಎಸ್. ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ
ಸಾಂಸ್ಕೃತಿಕ ಸಂಭ್ರಮ ನಡೆಯಿತು.











