ಸುಳ್ಯದ ಕಾರಣಿಕ ಸಾನಿಧ್ಯ ಶ್ರೀ ಕಲ್ಕುಡ ದೈವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಚಾಲನೆ

0

ನೂತನ ಸಮಿತಿ ರಚನೆ :
ಅಧ್ಯಕ್ಷ- ಕೃಷ್ಣ ಕಾಮತ್, ಪ್ರಧಾನ ಕಾರ್ಯದರ್ಶಿ – ಅಶೋಕ ಪ್ರಭು, ಖಜಾಂಜಿ- ಅವಿನಾಶ್ ಕುರುಂಜಿ

ಸುಳ್ಯದ ಗಾಂಧಿನಗರ ನಾವೂರಿನಲ್ಲಿರುವ ಕಾರಣಿಕ ಕ್ಷೇತ್ರವಾಗಿರುವ ಕಲ್ಕುಡ ದೖವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆಯಲಿದ್ದು ಪೂರ್ವಭಾವಿಯಾಗಿ ಜೀರ್ಣೋದ್ದಾರ ಸಮಿತಿಯನ್ನು ನ. 1 ರಂದು ರಚಿಸಲಾಯಿತು.

ದೈವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಪಿ. ಕೆ ಉಮೇಶ್ ರವರು ಅಧ್ಯಕ್ಷತೆ ವಹಿಸಿದ್ದರು.


ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ದಾರ ಕಾರ್ಯದ ಜವಾಬ್ದಾರಿ ನಿರ್ವಹಿಸಲು ನೂತನ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಶಾಸಕಿ
ಕು. ಭಾಗೀರಥಿ ಮುರುಳ್ಯ, ಗೌರವ ಸಲಹೆಗಾರರಾಗಿ ಮಾಜಿ ಮುಖ್ಯಮಂತ್ರಿ
ಡಿ. ವಿ. ಸದಾನಂದ ಗೌಡ,
ಡಾ. ಕೆ. ವಿ. ಚಿದಾನಂದ, ಗಿರೀಶ್ ಭಾರದ್ವಾಜ್,
ಡಾ.ಕೆ.ವಿ.ರೇಣುಕಾಪ್ರಸಾದ್, ಎನ್. ಎ. ರಾಮಚಂದ್ರ,
ಡಾ. ಹರಪ್ರಸಾದ್ ತುದಿಯಡ್ಕ, ಎಂ. ಬಿ. ಸದಾಶಿವ, ಅಧ್ಯಕ್ಷರನ್ನಾಗಿ ಹಿರಿಯ ಉದ್ಯಮಿ ಕೃಷ್ಣ ಕಾಮತ್, ಪ್ರಧಾನ ಕಾರ್ಯದರ್ಶಿ ಅಶೋಕ ಪ್ರಭು,ಕೋಶಾಧಿಕಾರಿ ಅವಿನಾಶ್ ಕುರುಂಜಿ, ಕಾರ್ಯದರ್ಶಿಗಳಾಗಿ ದಿನೇಶ್ ಮಡಪ್ಪಾಡಿ, ದೊಡ್ಡಣ್ಣ ಬರೆಮೇಲು, ಉಪಾಧ್ಯಕ್ಷರುಗಳಾಗಿ ನಾರಾಯಣ ಕೇಕಡ್ಕ, ಜಯಪ್ರಕಾಶ್ ರೈ, ವೆಂಕಪ್ಪ ಗೌಡ,ಡಿ. ಎಸ್. ಗಿರೀಶ್ ದೇವರಗುಂಡ, ಸದಾನಂದ ಮೂಲೆಮಜಲು, ಸುಧಾಕರ ರೈ,ಶಶಿಕಲಾ ನೀರಬಿದಿರೆ, ಇಂದಿರಾ ರೈ, ವಿನಯಕುಮಾರ್ ಕಂದಡ್ಕ, ವಿಕ್ರಮ್ ಅಡ್ಪಂಗಾಯ ರವರನ್ನು ಆಯ್ಕೆ ಮಾಡ ಲಾಯಿತು.
ಮುಂದಿನ ದಿನಗಳಲ್ಲಿ
ದೈವಜ್ಞರ ಚಿಂತನೆಯಲ್ಲಿ ಕಂಡು ಬಂದಂತೆ ಈಗಿರುವ ಗುಡಿಯನ್ನು ತೆರವು ಮಾಡಿ ದೈವಸ್ಥಾನದ ಗುಡಿಯನ್ನು ಶೀಲಾಮಯ ಕಲ್ಲಿನಿಂದ ಮತ್ತು ಉತ್ತಮ ಗುಣ ಮಟ್ಟದ ಮರದಿಂದ ನಿರ್ಮಾಣ ಮಾಡಿ ಮೇಲ್ಛಾವಣಿಗೆ ತಾಮ್ರದ ಹೊದಿಕೆ ಹಾಕುವ ಬಗ್ಗೆ ನೀಲಾ ನಕಾಶೆ ತಯಾರಿಸಲಾಗಿದೆ. 2026 ರ ಮೇ ತಿಂಗಳ ಒಳಗಾಗಿ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಸುವ ಚಿಂತನೆ ನಡೆಸಲಾಗಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಪಿ. ಕೆ. ಉಮೇಶ್ ರವರು ಪ್ರಾಸ್ತಾವಿಕ ಮಾತಿನೊಂದಿಗೆ ವಿವರ ನೀಡಿದರು.
ಈ ಸಂದರ್ಭದಲ್ಲಿ ಅಷ್ಟ ಮಂಗಲ ಪ್ರಶ್ನಾ ಚಿಂತನೆ ದಿನದಂದು ತಂತ್ರಿಯವರ ಸಮಕ್ಷಮದಲ್ಲಿ ಭಕ್ತರಿಂದ ಸಮರ್ಪಣೆ ಮಾಡಲಾದ ನಿಧಿ ಕುಂಭವನ್ನು
ದೈವಸ್ಥಾನದ ಎದುರಿನಲ್ಲಿ ನೂತನ ಜೀರ್ಣೋದ್ದಾರ ಸಮಿತಿಯಪದಾಧಿಕಾರಿಗಳಿಗೆ ಆಡಳಿತ ಮಂಡಳಿಯವರು ಹಸ್ತಾಂತರ ಮಾಡಿದರು.

ಕೈಲಾಸ್ ಶೆನೈ ಯವರು ಪ್ರಾರ್ಥಿಸಿದರು. ಆಡಳಿತ ಮಂಡಳಿಯ ಸದಸ್ಯ ಹರೀಶ್ ಬೂಡುಪನ್ನೆ ಸ್ವಾಗತಿಸಿ, ಕೋಶಾಧಿಕಾರಿ ದಿನೇಶ್ ಕುಮಾರ್ ಕೆ. ಸಿ ವಂದಿಸಿದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಆಡಳಿತ ಮಂಡಳಿಯ ಸದಸ್ಯರಾದ ಪಿ. ಆರ್ ಚಂದ್ರಶೇಖರ , ಐಡಿಯಲ್ ಭಾಸ್ಕರ ಗೌಡ, ಪ್ರಕಾಶ್ ಹೆಗ್ಡೆ, ಸೋಮನಾಥ ಪೂಜಾರಿ, ಕೇಶವ ನಾಯಕ್,
ಸತ್ಯಪ್ರಸಾದ್ ಕೆ, ದೈವಸ್ಥಾನ ದ ಪೂಜಾರಿಗಳಾದ ಮೋಹನ ಗೌಡ, ತಿಮ್ಮಪ್ಪ ಗೌಡ ನಾವೂರು ರವರು ಸಹಕರಿಸಿದರು.

ಸಭೆಯಲ್ಲಿ ಧಾರ್ಮಿಕ ಶ್ರದ್ದಾ ಕೇಂದ್ರದ ಪ್ರಮುಖರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ತಾಲೂಕಿನ ಭಜನಾ ಮಂದಿರದ ಪದಾಧಿಕಾರಿಗಳು, ಸದಸ್ಯರು,ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕರು ಮತ್ತು ಒಕ್ಕೂಟದ ಸದಸ್ಯರು,
ಸ್ಥಳೀಯ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.