ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ,ಸಂಪಾಜೆ ,ಕೊಡಗು ಇದರ ಆಶ್ರಯದಲ್ಲಿ ಶ್ರೀ ಭಗವಾನ್ ಸಂಘ ಚೆಂಬು ಮತ್ತು ಯುವಕೇಸರಿ ಯುವಕ ಸಂಘ ,ಬಾಲಂಬಿ ಇವರ ಜಂಟಿ ಸಹಯೋಗದಲ್ಲಿ ಪಯಸ್ವಿನಿ ಪ್ರಾ ಕೃ ಪ ಸ ಸಂಘದ ಬಾಲಂಬಿ ಶಾಖೆಯ ಆವರಣದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಪ್ರಾರಂಭದಲ್ಲಿ ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಮತಿ ಸಹನಾ ಕಾಂತಬೈಲುರವರು ಕನ್ನಡ ಭಾಷೆ ,ನಾಡು ನುಡಿಯ ಉಳಿಯುವಿಕೆಗಾಗಿ ನಾವು ಕಟಿಬದ್ದರಾಗಿರಬೇಕೆಂದು ಕರೆ ನೀಡಿದರು.















ಸೊಸೈಟಿಯ ಅದ್ಯಕ್ಷರಾದ ಶ್ರೀ. ಅನಂತ್ ಊರುಬೈಲು ಅದ್ಯಕ್ಷತೆ ವಹಿಸಿದ್ದು ,ಗ್ರಾ.ಪಂ ಅದ್ಯಕ್ಷ ಶ್ರೀ ತೀರ್ಥರಾಮ ಪೂಜಾರಿಗದ್ದೆ,ಸದಸ್ಯ ಶ್ರೀ ಆದಂ ಸೆಂಟ್ಯಾರ್,ಯುವಕೇಸರಿ ಅದ್ಯಕ್ಷ ಶ್ರೀ. ದಿನೇಶ್ ಸಣ್ಣಮನೆ,ಶ್ರೀ ಭಗವಾನ್ ಸಂಘದ ಅದ್ಯಕ್ಷ ಪ್ರಶಾಂತ್ ಊರುಬೈಲು,ಸೊಸೈಟಿ ಸಿಇಓ ಆನಂದ ಬಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕನ್ನಡ ನಾಡಗೀತೆ ಹಾಡಿ,ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕೈಗೊಳ್ಳಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ. ರೇಣುಕಾಕ್ಷ ಬಾಲಂಬಿ ವಂದಿಸಿದರು.ಸಂಸ್ಥೆಯ ಸಿಬ್ಬಂದಿವರ್ಗ,ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮಸ್ಥರು ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.










