ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ನ. 6ರಂದು ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ ಅಗ್ನಿ ಸುರಕ್ಷತಾ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಅಗ್ನಿ ಅವಘಡ ಮತ್ತು ಸುರಕ್ಷತೆಯ ಬಗ್ಗೆ ಕೆ.ವಿ.ಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಗ್ನಿ ಸುರಕ್ಷತಾ ವಿಭಾಗದ ಅಧಿಕಾರಿ, ಮದನ್ ಧರ್ಮ ಮಾಹಿತಿ ನೀಡಿದರು.















ವೇದಿಕೆಯಲ್ಲಿ ಕಾಲೇಜಿನ ಪ್ರಾoಶುಪಾಲೆ ಶ್ರೀಮತಿ ಟೀನಾ ಎಚ್.ಎಸ್, ಆಡಳಿತಾಧಿಕಾರಿ ಪ್ರೊ. ಕೆ.ವಿ. ದಾಮೋದರ ಗೌಡ, ಕಾಲೇಜಿನ ರೆಡ್ ಕ್ರಾಸ್ ಘಟಕದ ಸಹ ಸಂಯೋಜಕಿ ಶ್ರೀಮತಿ ಶರ್ಮಿಳಾ ಬಿ. ರೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕು. ಪ್ರಲೋಕ್ಷ ಹಾಗೂ ಕು. ಶ್ವೇತಲ್ ಪ್ರಾರ್ಥಿಸಿದರು. ಕು. ಚಂದನ ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಿಜಯ್ ಕೆ ವಂದಿಸಿದರು. ಕು. ಗಾನಶ್ರೀ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೆeತರ ವೃಂದದವರು , ವಿದ್ಯಾರ್ಥಿಗಳು ಭಾಗವಹಿಸಿ ಅಗ್ನಿ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ತದನಂತರ ಪ್ರಾತ್ಯಕ್ಷಿಕೆ ನಡೆಯಿತು.










