ನ. 25ರಿಂದ ನ. 29: ಕೋಟೆ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ, ಪೂರ್ವಭಾವಿ ಸಭೆ

0

ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ನ. 25ರಿಂದ ನ. 29ರ ತನಕ ಜರಗಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ನ. 7ರಂದು ದೇವಸ್ಥಾನದಲ್ಲಿ ನಡೆಯಿತು. ಧರ್ಮದರ್ಶಿ‌ ಮತ್ತು ಪ್ರಧಾನ ಗೌರವ ಅರ್ಚಕರಾದ ವಾರಣಾಶಿ ಗೋಪಾಲಕೃಷ್ಣ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು.

ಧರ್ಮದರ್ಶಿ ಸೀತಾರಾಮ ಕೋಟೆ, ಆರ್ಥಿಕ ಹಾಗೂ ಉತ್ಸವ ಸಮಿತಿ ಸಂಚಾಲಕರಾದ ರಮೇಶ್ ಕೋಟೆ, ಸಹ ಸಂಚಾಲಕರಾದ ಡಾ. ನಾರಾಯಣ ಶೇಡಿಕಜೆ ಮತ್ತು ಅಶೋಕ ಕೆದಿಲ, ಸದಸ್ಯರಾದ ವಿ. ಸುಬ್ಬಪಯ್ಯ, ಎಸ್. ಶಂಕರನಾರಾಯಣ, ಈಶ್ವರ ವಾರಣಾಶಿ, ಶುಭ ಕುಮಾರ್ ಬಾಳೆಗುಡ್ಡೆ, ಈಶ್ವರ ಗೌಡ ಕಜೆಮೂಲೆ, ಗಂಗಾಧರ ತೋಟದಮೂಲೆ, ಶಿವರಾಮ ಕಜೆಮೂಲೆ, ಶಿವಸುಬ್ರಹ್ಮಣ್ಯ ಕೆದಿಲ, ಸುಬ್ರಾಯ ಭಾರದ್ವಾಜ್, ಹೆಬ್ಬಾರ್ ರಾಮಕೃಷ್ಣ ವಾರಣಾಶಿ, ಶ್ಯಾಮಪ್ರಸಾದ್ ತಂಟೆಪ್ಪಾಡಿ, ಡಾ. ಅನಂತಕೃಷ್ಣ ಕೆದಿಲ, ಅರ್ಚಕರಾದ ಪವನ್ ಕುಮಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.