ಸುಬ್ರಹ್ಮಣ್ಯ; ಕೆ ಎಸ್ ಎಸ್ ಕಾಲೇಜಿನ ದೇವಿಕಾ ರಾಷ್ಟ್ರೀಯ ಭಾವೈಕ್ಯತೆ ಶಿಬಿರಕ್ಕೆ ಆಯ್ಕೆ

0

ಸುಬ್ರಹ್ಮಣ್ಯದ ಕೆ ಎಸ್ ಎಸ್ ಕಾಲೇಜಿನ ದೇವಿಕಾ ರಾಷ್ಟ್ರೀಯ ಭಾವೈಕ್ಯತೆ ಶಿಬಿರಕ್ಕೆ ಆಯ್ಕೆಯಾಗಿರುವುದಾಗಿ ವರದಿಯಾಗಿದೆ.

ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನ. 11 ರಿಂದ ನ.17 ರವರೆಗೆ
ಕುರುಕ್ಷೇತ್ರ ವಿಶ್ವವಿದ್ಯಾನಿಲಯ ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಎನ್ಎಸ್ಎಸ್ ಸ್ವಯಂ ಸೇವಕಿ ಯಾಗಿ ಭಾಗವಹಿಸಲಿದ್ದಾರೆ. ದೇವಿಕಾ ದ್ವಿತೀಯ ಬಿಕಾಂ ವಿದ್ಯಾರ್ಥಿಯಿನಿಯಾಗಿದ್ದು
ರಾಮಕುಂಜದ ಹೇಮಾಕ್ಷಾ ಮತ್ತು ಪ್ರಮೀಳಾ ದಂಪತಿಗಳ ಪುತ್ರಿ.