
ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯೆ ಚಂದ್ರಾವತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ , ಕಥೆ ಹಾಗೂ ಹಾಡಿನ ಮೂಲಕ ಕನ್ನಡದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕಿ ಶ್ರೀಮತಿ.ಗೀತಾಂಜಲಿ ಟಿ.ಜಿ ಅವರು ವಹಿಸಿದ್ದರು.









ಪುಟಾಣಿ ಮಕ್ಕಳು ಕನ್ನಡ ಗೀತೆ , ಕನ್ನಡ ಗಾದೆಮಾತುಗಳು , ಕನ್ನಡ ನುಡಿಮುತ್ತುಗಳನ್ನು ಹೇಳಿದರು ಹಾಗೂ ಕನ್ನಡದ ಕುರಿತು ಮಾತನಾಡಿದರು.
ಪುಟಾಣಿಗಳಾದ ರಯಾನ್ ಸ್ವಾಗತಿಸಿ , ಶಜ್ನಾ ಪ್ರಾರ್ಥಿಸಿ , ರುತ್ವಿಕ ವಂದಿಸಿದರು. ಶ್ರೀಮತಿ. ನಿರ್ಮಲ ಕಾರ್ಯಕ್ರಮವನ್ನು ನಿರೂಪಿಸಿದರು.










