ರಸ್ತೆಯಲ್ಲಿ ಜಾರಿ ಬಿದ್ದು ಅಂಗನವಾಡಿ ಬಾಲಕಿಯ ತಲೆಗೆ ಗಾಯ

0

ಸಂಪೂರ್ಣ ಹದಗೆಟ್ಟ ಪೊಳೆಂಜ – ಕಂಬಳ ರಸ್ತೆಯ ಪರಿಣಾಮ

ಬಾಲಕಿಯ ತಾಯಿಯಿಂದ ಪಂಚಾಯತ್ ಗೆ ದೂರು

ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಳೆಂಜ – ಕಂಬಳ ರಸ್ತೆ ಸಂಪೂರ್ಣ ಹದಗೆಟ್ಟಿದ್ದು , ಈ ರಸ್ತೆಯಲ್ಲಿ ಬಿದ್ದು ಬಾಲಕಿಯ ತಲೆಗೆ ಏಟಾಗಿದೆ.

ಈ ರಸ್ತೆಯ ದುಸ್ಥಿತಿಯ ಬಗ್ಗೆ ಸುದ್ದಿ ಚಾನೆಲ್ ಮತ್ತು ಪತ್ರಿಕೆ ವರದಿ ಮಾಡಿತ್ತು. ಈ ಸಂದರ್ಭ ಫಲಾನುಭವಿಗಳು ಸೇರಿ ರಸ್ತೆ ದುರಸ್ತಿಗೆ ಒಂದು ವಾರ ಗಡುವು ನೀಡಿದ್ದು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು.

ಈ ಮಧ್ಯೆ ಪಾಂಡಿಗದ್ದೆ ಅಂಗನವಾಡಿ ಕೇಂದ್ರಕ್ಕೆ ತೆರಳುತ್ತಿದ್ದ ಸಾದ್ವಿ ಎಂಬ ಬಾಲಕಿ ಈ ರಸ್ತೆಯಲ್ಲಿ ಜಾರಿ ಬಿದ್ದು ತಲೆಗೆ ಗಾಯವಾಗಿದೆ . ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಬಾಲಕಿಯ ತಾಯಿ ಪ್ರೇಮ ಈ ಬಗ್ಗೆ ಗ್ರಾಮ ಪಂಚಾಯತ್ ಗೆ ದೂರು ಸಲ್ಲಿಸಿ ರಸ್ತೆ ದುರಸ್ತಿ ಗೊಳಿಸುವಂತೆ ಗ್ರಾಮ ಪಂಚಾಯತ್ ಗೆ ತಿಳಿಸಿದ್ದಾರೆಂದು ತಿಳಿದುಬಂದಿದೆ.