








ಕೊಡಗು ಜಿಲ್ಲಾ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ 8ನೇ ತರಗತಿಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನವನ್ನು ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಧ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ. ಕುಶಾಲಪ್ಪ ರವರು ತರಬೇತಿ ನೀಡಿದ್ದು, ಉತ್ತಮ ಸಾಧನೆ ಮಾಡಿದ ವಿಜೇತ ವಿದ್ಯಾರ್ಥಿನಿಯರ ತಂಡಕ್ಕೆ ಹಾಗೂ ತಂಡದ ವ್ಯವಸ್ಥಾಪಕರಾಗಿ ಸಹಕರಿಸಿದ ಅಧ್ಯಾಪಕರಾದ ಶ್ರೀ ಹೆಚ್. ಜಿ. ಕುಮಾರ್ ಹಾಗೂ ಶ್ರೀಮತಿ ಸೃಷ್ಟೀರವರಿಗೆ ಆಡಳಿತ ಮಂಡಳಿಯವರು ಬೋಧಕ-ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಶುಭಹಾರೈಸಿದ್ದಾರೆ.










