ಅಕ್ಷಯ ಯುವಕ ಮಂಡಲದ ಬೆಳ್ಳಿ ಹಬ್ಬದ ಅಂಗವಾಗಿ ಲೀಗ್ ಮಾದರಿಯ ಸೀಸನ್ 10ರ ವಾಲಿಬಾಲ್ ಪಂದ್ಯಾಟವು ಅ.19ರಂದು ನೆಟ್ಟಾರು ಶಾಲಾ ಮೈದಾನದಲ್ಲಿ ನಡೆಯಿತು.

ಪಂದ್ಯಾಟವನ್ನು ಬೆಳ್ಳಾರೆ ಸಿ ಎ ಬ್ಯಾಂಕಿನ ನಿವೃತ್ತ ಲೆಕ್ಕ ಪಾಲಕರಾದ ದಿವಾಕರ ರೈ ಮರೀಕೆಯಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಿರಂತರ ಕಾರ್ಯಕ್ರಮಗಳ ಮೂಲಕ ಯುವಕ ಮಂಡಲವು ಊರಿನಲ್ಲಿ ಪ್ರಸಿದ್ದಿ ಪಡೆದಿದೆ. ಈ ಬಾರಿಯ ಬೆಳ್ಳಿ ಹಬ್ಬವು ವಿಜೃಂಭಣೆಯಿಂದ ನಡೆಯಲಿ ಎಂದು ಹಾರೈಸಿ ಪಂದ್ಯಾಟಕ್ಕೆ ಶುಭಕೋರಿದರು.

ಮುಖ್ಯ ಅತಿಥಿಯಾದ ಜಯಪ್ರಕಾಶ್ ರೈ ಪೆರುವಾಜೆ ಮಾತನಾಡಿ ಅಕ್ಷಯ ಯುವಕ ಮಂಡಲವು ಕ್ರೀಡೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಗುರುತಿಸಿಕೊಂಡಿರುವ ಸಂಸ್ಥೆಯಾಗಿದೆ. ಕ್ರೀಡೆಯು ಸಹೋದರತೆ ಸಹಬಾಳ್ವೆಯನ್ನು ಸೂಚಿಸುತ್ತದೆ. ಇನ್ನಷ್ಟು ಕೆಲಸ ಕಾರ್ಯಗಳು ನಿಮ್ಮಿಂದ ಆಗಲಿ ಎಂದು ಹಾರೈಸಿದರು. ಇನ್ನೊರ್ವ ಅತಿಥಿ ನೆಟ್ಟಾರು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಸಂತ ನೆಟ್ಟಾರು ಮಾತನಾಡಿ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಈ ವರ್ಷ ಬೆಳ್ಳಿಹಬ್ಬವನ್ನು ಆಚರಿಸಲಿರುವ ಯುವಕ ಮಂಡಲಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಸ್ಥಾಪಕಧ್ಯಕ್ಷರಾದ ದೇವದಾಸ್ ನೆಟ್ಟಾರು ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು.ಕೋಶಾಧಿಕಾರಿ ಚಂದ್ರಶೇಖರ ಮೊಗಪ್ಪೆ ಸ್ವಾಗತಿಸಿದರು.ಯುವಕ ಮಂಡಲ ಅಧ್ಯಕ್ಷ ಭಾಸ್ಕರ ನೆಟ್ಟಾರು ಧನ್ಯವಾದವಿತ್ತರು. ಜಯಪ್ರಕಾಶ್ ರೈ ಪೆರುವಾಜೆ ಪಂದ್ಯಾಟಕ್ಕೆ ಚಾಲನೆ ನೀಡಿದರು ನಂತರ ಆರು ತಂಡಗಳ ನಡುವೆ ಲೀಗ್ ಮಾದರಿಯ ಪಂದ್ಯಾಟ ನಡೆಯಿತು.















ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಭಾಸ್ಕರ ನೆಟ್ಟಾರು ವಹಿಸಿದ್ದರು.ಮುಖ್ಯ ಅತಿಥಿಯಾಗಿ ಬೆಳ್ಳಾರೆ ಸಿ ಎ ಬ್ಯಾಂಕ್ ಅಧ್ಯಕ್ಷರಾದ ಆರ್ ಕೆ ಭಟ್ ಕುರುಂಬುಡೇಲು ಮಾತನಾಡಿ ಅಕ್ಷಯದ ಸದಸ್ಯರು ಇರುವವರು ದೊಡ್ಡ ಶ್ರೀಮಂತರಲ್ಲ ಆದರೆ ಹೃದಯವಂತಿಕೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಕೊಂಡಿರುವ ಸಂಸ್ಥೆಯಾಗಿದೆ. ಬೆಳ್ಳಿಹಬ್ಬದ ಪ್ರಯುಕ್ತ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೀರಿ,ನಿಮಗೆ ಶುಭಹಾರೈಕೆಗಳು ಎಂದರು. ಅತಿಥಿಯಾದ ಹೇಮನಾಥ್ ಕುಲಾಲ್ ನೆಟ್ಟಾರು ಮಾತನಾಡಿ ನಮ್ಮ ಊರಿನ ನೆಚ್ಚಿನ ಸಂಸ್ಥೆ ಅದು ಅಕ್ಷಯ ಯುವಕ ಮಂಡಲ ಇದರ ಇನ್ನು ಮುಂದೆ ನಡೆಯುವ ಕಾರ್ಯಕ್ರಮಕ್ಕೆ ತನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ವೇದಿಕೆಯಲ್ಲಿ ಪ್ರಗತಿಪರ ಕೃಷಿಕರಾದ ಅರುಣಶಂಕರ ನೆಟ್ಟಾರು, ಕೋಡಿಬೈಲು ಇಂಪೋರ್ಟ್ ಎಕ್ಸ್ ಪೋರ್ಟ್ ಇದರ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್ ರಾಮ್ ಕೋಡಿಬೈಲು, ಜಯಪ್ರಕಾಶ್ ದಾಸನಮಜಲು ಉಪಸ್ಥಿತರಿದ್ದರು.ಅಧ್ಯಕ್ಷರಾದ ಭಾಸ್ಕರ ನೆಟ್ಟಾರು ಮಾತನಾಡಿ ಪಂದ್ಯಾಟವು ದಾನಿಗಳ ಸಹಕಾರದಿಂದ ಹಾಗೂ ಸದಸ್ಯರ ಪಾಲ್ಗೊಳ್ಳಯುವಿಕೆಯಿಂದ ಯಶಸ್ವಿಯಾಗಿದೆ ತಮ್ಮೆಲ್ಲರಿಗೂ ಧನ್ಯವಾದಗಳು ಎಂದರು. ಬೆಳ್ಳಿಹಬ್ಬದ ಆಚರಣೆಗೆ ತಮ್ಮೆಲ್ಲರ ಸಹಕಾರವಿರಲಿ ಎಂದರು. ಯುವಕ ಮಂಡಲ ಹಿರಿಯ ಸದಸ್ಯ ಹಾಗೂ ವಾಲಿಬಾಲ್ ಕ್ರೀಡಾಪಟು ಶ್ರೀ ಗುರುವಪ್ಪ ಕುಲಾಲ್ ಚಾವಡಿಬಾಗಿಲು ಇವರನ್ನು ಸನ್ಮಾನಿಸಲಾಯಿತು.
ಪಂದ್ಯಾಟದಲ್ಲಿ ಚೇತನ್ ಕುಮಾರ್ (ಕುಣಿಗಲ್) ನೆಟ್ಟಾರು ಮಾಲಕತ್ವದ ರೈಸಿಂಗ್ ಸ್ಟಾರ್ ನೆಟ್ಟಾರು ತಂಡ ಪ್ರಥಮ ಬಹುಮಾನ ಪಡೆಯಿತು. ದ್ವಿತೀಯ ಬಹುಮಾನವನ್ನು ಭಾಸ್ಕರ ನೆಟ್ಟಾರು ಮಾಲಕತ್ವದ ಟೀಮ್ ಜಲದುರ್ಗಾ ನೆಟ್ಟಾರು ತಂಡ ಪಡೆದುಕೊಂಡಿತು.ತೃತೀಯ ಬಹುಮಾನ ಪ್ರವೀಣ್ ಚಾವಡಿಬಾಗಿಲು ಮಾಲಕತ್ವದ ಟೀಮ್ ಮಹಾಲಿಂಗೇಶ್ವರ ಚಾವಡಿಬಾಗಿಲು ಹಾಗೂ ಚತುರ್ಥ ಬಹುಮಾನ ನಿತಿನ್ ನೆಟ್ಟಾರು ಮಾಲಕತ್ವದ ಶಿರಾಡಿ ಫ್ರೆಂಡ್ಸ್ ನೆಟ್ಟಾರು ತಂಡ ಪಡೆದುಕೊಂಡಿತು. ಬೆಸ್ಟ್ ಸ್ಮೆಶಾರ್ ಆಗಿ ರೈಸಿಂಗ್ ಸ್ಟಾರ್ ತಂಡದ ನಾಯಕ ಸುಹಾನ್ ರೈ ಮಣಿಕ್ಕಾರ, ಆಲ್ ರೌಂಡರ್ ಆಗಿ ಟೀಮ್ ಜಲದುರ್ಗಾ ತಂಡದ ಸುಚಿನ್ ಹಾಗೂ ಬೆಸ್ಟ್ ಪಾಸರ್ ಆಗಿ ರೈಸಿಂಗ್ ಸ್ಟಾರ್ ತಂಡದ ಜಯಪ್ರಕಾಶ್ ಮೊಗಪ್ಪೆ ಹೊರಹೊಮ್ಮಿದರು. ಪ್ರವೀಣ್ ಚಾವಡಿ ಬಾಗಿಲು ಸ್ವಾಗತಿಸಿ, ಕಾರ್ಯದರ್ಶಿ ಶೈಲೇಶ್ ನೆಟ್ಟಾರು ವಂದಿಸಿದರು. ವಸಂತ ನೆಟ್ಟಾರು ಕಾರ್ಯಕ್ರಮ ನಿರೂಪಿಸಿದರು.










