ಪೆರುವಾಜೆ ಅಂಗನವಾಡಿ ಕೇಂದ್ರದಲ್ಲಿ ಗೌರವಾರ್ಪಣೆ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ

0

ಐಸಿಡಿಎಸ್ 50 ನೇ ವರ್ಷಾಚರಣೆ ಅಂಗವಾಗಿ ಪೆರುವಾಜೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಸಂಪೂರ್ಣ ಹವಾನಿಯಂತ್ರಿತ ಸ್ಮಾರ್ಟ್ ಅಂಗನವಾಡಿ ಕೇಂದ್ರವಾಗಿ ಪರಿವರ್ತಿಸಲು ಕಾರಣೀಕರ್ತರಾದವರಿಗೆ ಗೌರವಾರ್ಪಣಾ ಕಾರ್ಯಕ್ರಮ ನ.15 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಚೇತನಾ ಇವರು ವಹಿಸಿದ್ದರು, ಕಾರ್ಯಕ್ರಮವನ್ನು ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಪದ್ಮನಾಭ ಪೆರುವಾಜೆ ಉದ್ಘಾಟಿಸಿ ಶುಭ ಹಾರೈಸಿದರು.
ಸಂಪೂರ್ಣ ಹವಾನಿಯಂತ್ರಿತ ಸ್ಮಾರ್ಟ್ ಅಂಗನವಾಡಿ ಕೇಂದ್ರವಾಗಿ ಪರಿವರ್ತಿಸಿದ ಸುನಿಲ್ ಕುಮಾರ್ ಪೆರುವಾಜೆ ಹಾಗೂ ಉಷಾ ಪ್ರಸಾದ್ ರೈ ವಲಯ ಮೇಲ್ವಿಚಾರಕರು ಇವರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಊರವರು ನೆರವೇರಿಸಿದರು.


ಈ ಸಂದರ್ಭದಲ್ಲಿ ದಿ||ಭವಾನಿ ಶೆಟ್ಟಿ ಸ್ಮರಣಾರ್ಥ ಪತಿ ವಿಠಲ ಶೆಟ್ಟಿ ಹಾಗೂ ಮಕ್ಕಳು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದರು, ಪೋಷಣಾ ಅಭಿಯಾನದಡಿ ಶ್ರೀಮತಿ ಸುಪ್ರಿತಾ ನಯನ್ ಕುಮಾರ್ ಕೊಟ್ಟೆಕಾಯಿ ಇವರಿಗೆ ಸೀಮಂತ ಕಾರ್ಯಕ್ರಮವನ್ನು ಅಂಗನವಾಡಿ ವತಿಯಿಂದ ನೆರವೇರಿಸಲಾಯಿತು. ಅಂಗನವಾಡಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮೆರುಗನ್ನು ಹೆಚ್ಚಿಸಿತು, ಈ ಸಂದರ್ಭದಲ್ಲಿ ಮಕ್ಕಳಿಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಅನುಸೂಯ ಇವರು ಬಹುಮಾನ ಪ್ರಾಯೋಜಿಸಿ ವಿತರಿಸಿದರು.


ಜಯಲಕ್ಷ್ಮಿ ಲೋಕೇಶ್ ಪೆರುವಾಜೆ ಇವರು ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ಪ್ರಾಯೋಜಿಸಿ ವಿತರಿಸಿದರು, ಪ್ರೀತಂ ರೈ ಪೆರುವಾಜೆ ಮದ್ಯಾಹ್ನದ ಸಿಹಿ ಊಟದ ವ್ಯವಸ್ಥೆಯನ್ನು ಉಣಬಡಿಸಿದರು, ಈ ಸಂದರ್ಭದಲ್ಲಿ ಇಲಾಖೆಯಿಂದ ಆಟಿಕೆ ಸಾಮಾನುಗಳನ್ನು ಅಂಗನವಾಡಿಗೆ ಹಸ್ತಾಂತರಿಸಲಾಯಿತು, ಈ ಕಾರ್ಯಕ್ರದಲ್ಲಿ ಬಾಲವಿಕಾಸ ಸಮಿತಿಯ ಸದಸ್ಯರು ಮಕ್ಕಳ ಹೆತ್ತವರು ಹಾಗೂ ಊರವರು ಭಾಗವಹಿಸಿದ್ದರು.
ಜಯಲಕ್ಷ್ಮಿ ಪ್ರಾರ್ಥಿಸಿ, ಹಳೆವಿದ್ಯಾರ್ಥಿ ಪ್ರಜ್ಞಾ ಸ್ವಾಗತಿಸಿದರು, ಅಂಗನವಾಡಿ ಕಾರ್ಯಕರ್ತೆ ರಂಜಿತಾ ವಂದಿಸಿ, ಕಾರ್ಯಕ್ರಮದ ನಿರೂಪಣೆಯನ್ನು ಅಕ್ಷತಾ ನಾಗನಕಜೆ ನಿರ್ವಹಿಸಿದರು, ಅಂಗನವಾಡಿ ಸಹಾಯಕಿ ಬೇಬಿ ಸಹಕರಿಸಿದರು.