ದೊಡ್ಡೇರಿ ಅಂಗನವಾಡಿ ಕೇಂದ್ರಕ್ಕೆ ಚಯರ್ ಕೊಡುಗೆ

0

ಅಜ್ಜಾವರ ‌ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಜಯರಾಮ ಅತ್ಯಡ್ಕ ಹಾಗೂ ಡಾ. ಮನೋಜ್ ಕುಮಾರ್ ಅತ್ಯಡ್ಕ ಇವರು ದೊಡ್ಡೇರಿ ಅಂಗನವಾಡಿ ಕೇಂದ್ರಕ್ಕೆ ಚಯರ್ ಗಳನ್ನು ಕೊಡುಗೆಯಾಗಿ ನೀಡಿದ್ದು, ನ.17ರಂದು ಹಸ್ತಾಂತರ ನಡೆಯಿತು.


ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ನಡೆಸಲಾಗಿದ್ದು, ಬಹುಮಾನವನ್ನು ಜಯರಾಮ ಕೊರಂಬಡ್ಕ ಹಾಗೂ ರೇವತಿ ರಾಧಾಕೃಷ್ಣ ದೊಡ್ಡೇರಿ ನೀಡಿದರು.

ದೊಡ್ಡೇರಿ ಶಾಲಾ ಮುಖ್ಯೋಪಾಧ್ಯಾಯರಾದ ಕೃಷ್ಣಾನಂತ ಶರಳಾಯ ಮಕ್ಕಳಿಗೆ ಪುಸ್ತಕವನ್ನು ನೀಡಿದರು.

ಮಕ್ಕಳ ಪೋಷಕರು, ಬಾಲವಿಕಾಸ ಸಮಿತಿಯ ಅಧ್ಯಕ್ಷರು, ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಉಷಾ ಶಶಿಧರ್ ಸ್ವಾಗತಿಸಿ, ಧನ್ಯವಾದ ಮಾಡಿದರು.