ರೆಂಜಾಳ ಅಂಗನವಾಡಿ ಕೇಂದ್ರದಲ್ಲಿ ಮರ್ಕಂಜ ಗ್ರಾಮದ ಶ್ರೀ ಮಹಾವಿಷ್ಣು ಗೊಂಚಲು ಸಭೆ

0

ರೆಂಜಾಳ ಅಂಗನವಾಡಿ ಕೇಂದ್ರದಲ್ಲಿ ಮರ್ಕಂಜ ಗ್ರಾಮದ ಶ್ರೀ ಮಹಾವಿಷ್ಣು ಗೊಂಚಲು ಸಭೆಯು ನ. 20ರಂದು ನಡೆಯಿತು.

ಇಂಚರ ಸಮಾಲೋಚನೆ ಕೇಂದ್ರ ಪುತ್ತೂರು ಇದರ ಆಪ್ತ ಸಮಾಲೋಚಕಿ ಸೌಮ್ಯ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜನರಿಗೆ ಉತ್ತಮ ಮಾನಸಿಕ ಆರೋಗ್ಯ ಹಾಗೂ ಮಾನಸಿಕ ಅಸ್ವಸ್ಥತೆಯ ಬಗ್ಗೆ ಹಾಗೂ ಮಕ್ಕಳ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸುವ ಬಗ್ಗೆ ತಿಳಿಸಿದರು.
ಬೊಮ್ಮಾರು ಗಜಾನನ ಯುವತಿ ಮಂಡಳಿ ಇವರು ಅಂಗನವಾಡಿ ಕೇಂದ್ರದಲ್ಲಿ ಪಂಚ ಸಪ್ತತಿ ಅಭಿಯಾನದ ಅಡಿಯಲ್ಲಿ ಸಾಲು ಮರ ತಿಮ್ಮಕ್ಕನ ಸ್ಮರಣಾರ್ಥ ಗಿಡ ನೆಡುವ ಮೂಲಕ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗೀತಾ ಹೊಸೊಲಿಕೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಗೊಂಚಲು ಸದಸ್ಯರು, ಬೊಮ್ಮಾರು ಗಜಾನನ ಯುವತಿ ಮಂಡಳಿ ಸದಸ್ಯರು, ಪುಟಾಣಿ ಮಕ್ಕಳು ಹಾಜರಿದ್ದರು.
ಪೋಷಣ್ ಅಭಿಯಾನದ ಅಡಿಯಲ್ಲಿ ನಡೆಯುವ ಸಮುದಾಯ ಆಧಾರಿತ ಸೀಮಂತ ಹಾಗೂ ಅನ್ನ ಪ್ರಾಷಣ ಕಾರ್ಯಕ್ರಮ ಕೂಡ ನಡೆಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರತ್ನಾವತಿ ಸ್ವಾಗತಿಸಿ, ಚಿತ್ರ ಪೊಣ್ಣುರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.