ತೊಡಿಕಾನ ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ – ಜನರ ಪರದಾಟ

0

ಜಲಜೀವನ್ ಯೋಜನೆ ಪೈಪ್ ಅಳವಡಿಕೆ ಗುಂಡಿ ತೋಡಿ ಬಿಸ್‌ಎನ್‌ಎಲ್ ನೆಟ್ವರ್ಕ್ ಕೇಬಲ್ ಕಟ್

ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ

ತೊಡಿಕಾನ ಗ್ರಾಮದಲ್ಲಿ ಜಲಜೀವನ ಯೋಜನೆ ನೀರಿನ ಪೈಪು ಲೈನಿಗಾಗಿ ತೋಡಿದ ಗುಂಡಿಯಿಂದಾಗಿ ಬಿಎಸ್‌ಎನ್‌ಎಲ್ ಕೇಬಲ್ ತುಂಡಾದ ಕಾರಣದಿಂದ ತೊಡಿಕಾನ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ನೆಟ್ವರ್ಕ್ ಇಲ್ಲದೆ ಜನರು ಪರದಾಟ ನಡೆಸುವ ಘಟನೆ ವರದಿಯಾಗಿದೆ.

ಬಿಎಸ್‌ಎನ್‌ಎಲ್ ನೆಟ್ವರ್ಕ್ ಇಲ್ಲದ ಸಮಸ್ಯೆ ಬಗ್ಗೆ ಹಾಗೂ ನೀರಿನ ಪೈಪ್ ಗೆ ತೋಡಿದ ಗುಂಡಿಯಿಂದ ಸಮಸ್ಯೆಯದ ಘಟನೆಯಿಂದ ತೊಡಿಕಾನ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿಯನ್ನು ನೀಡಿದರು. ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತು ಕೊಂಡು ಇರುವುದರಿಂದ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ,ವಿಜಯ ಬ್ಯಾಂಕ್, ಪೋಸ್ಟ್ ಆಫೀಸ್, ಹಾಲು ಡೈರಿ, ಮತ್ತು ಶಾಲೆ ಅಡ್ಯಡ್ಕ ಸೊಸೈಟಿ ಬ್ರಾಂಚ್ ಇವೆಲ್ಲವೂ ನೆಟ್ ವರ್ಕ್ ಸಮಸ್ಯೆಯಿಂದ ಕೆಲಸವೂ ಸ್ಥಗಿತಗೊಂಡಿದೆ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ದುರಸ್ತಿಗೊಳಿಸಲು ಸಾರ್ವಜನಿಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.