ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಕೊಡುಗೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೂತ್ಕುಂಜ ಗ್ರಾಮದ ಕುಳ್ಳಾಜೆ ಶ್ರೀಮತಿ ರುಕ್ಮಿಣಿ ರವರಿಗೆ ‘ವಾತ್ಸಲ್ಯ’ ಮನೆ ಹಸ್ತಾಂತರ ಕಾರ್ಯಕ್ರಮ ನ.28 ರಂದು ನಡೆಯಿತು.

ಡಾ. ಡಿ ವೀರೇಂದ್ರ ಹೆಗ್ಗಡೆಯವರ ಪತ್ನಿ ಶ್ರೀಮತಿ ಹೇಮಾವತಿ ವಿ ಹೆಗ್ಗಡೆ ಯವರ ಸಹೋದರಿ ಶ್ರೀಮತಿ ಪ್ರಿಯದರ್ಶಿನಿ ಶೆಟ್ಟಿಮೂಲೆ ರವರು ಉದ್ಘಾಟಿಸಿದರು. ಕೂತ್ಕುಂಜ ಒಕ್ಕೂಟ ಅಧ್ಯಕ್ಷೆ ಶ್ರೀಮತಿ ನಳಿನಿ ಮಂಚಿಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು.















ಕಾರ್ಯಕ್ರಮದಲ್ಲಿ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ಯೋಜನಾಧಿಕಾರಿ ಮಾಧವ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಸದಸ್ಯೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ವಿಶ್ವನಾಥ ಸಂಪ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ನಾಗೇಶ್ ಕಿನ್ನಿಕುಮೇರಿ, ಕಾರ್ಯದರ್ಶಿ ಕರುಣಾಕರ ಎಣ್ಣೆಮಜಲು, ಪೂರ್ವಾಧ್ಯಕ್ಷ ಕುಮಾರ ಸ್ವಾಮಿ ಕಿನ್ನಿಕುಮೇರಿ, ಗ್ರಾಮಾಭಿವೃದ್ಧಿ ಯೋಜನೆಯ ವಲಯ ಅಧ್ಯಕ್ಷ ಧರ್ಮಪಾಲ ಕಣ್ಕಲ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು. ಬಿ., ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಂಜ ವಲಯ ಮೇಲ್ವಿಚಾರಕ ಹೇಮಂತ್, ಜನಜಾಗೃತಿ ವೇದಿಕೆ ಸದಸ್ಯ ಮೋನಪ್ಪ ಗೌಡ ಬೊಳ್ಳಾಜೆ, ಶೇಷಪ್ಪ ಮೇಸ್ತ್ರಿ, ಸೇವಾ ಪ್ರತಿನಿಧಿಗಳು, ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಅನೇಕ ಒಕ್ಕೂಟ ಪದಾಧಿಕಾರಿಗಳು, ಜ್ಞಾನ ವಿಕಾಸ ಸಮಿತಿಯರು, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಮಾಧವ ಗೌಡ ಸ್ವಾಗತಿಸಿದರು. ಸೇವಾ ಪ್ರತಿನಿಧಿ ತಾರಾ ಏನೆಕಲ್ಲು ವಂದಿಸಿದರು. ಸೇವಾ ಪ್ರತಿನಿಧಿಗಳಾದ ಭವ್ಯ ಪಂಜ, ವೀಣಾ ಕೇನ್ಯ ಸಹಕರಿಸಿದರು.

ಒಂಟಿ ಜೀವನ : ಕುಳ್ಳಾಜೆ ಶ್ರೀಮತಿ ರುಕ್ಮಿಣಿ ಯವರ ಪತಿ ಚೆನ್ನಪ್ಪ ಗೌಡರು ಅನೇಕ ವರ್ಷಗಳ ಹಿಂದೆ ನಿಧನರಾಗಿದ್ದರು . ಕುಟುಂಬ ನಿರ್ವಹಿಸುತ್ತಿದ್ದ ಏಕೈಕ ಪುತ್ರ ಮೋಹನ್ ಆರು ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದು. ಬಳಿಕ ರುಕ್ಮಿಣಿಯವರು ಒಂಟಿಯಾಗಿ ಕಷ್ಟಕರ ಜೀವನ ನಡೆಸುತ್ತಿದ್ದರು. ಇದನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಲಯನ್ಸ್ ಕ್ಲಬ್ ನೀರಿನ ಟ್ಯಾಂಕ್, ಮನೆಗೆ ಅಗತ್ಯ ವಸ್ತು ಒದಗಿಸಿ ಕೊಟ್ಟಿದ್ದಾರೆ. ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಶ್ರಮದಾನ ಮಾಡಿ ಸೇವೆ ಸಲ್ಲಿಸಿದ್ದಾರೆ.










