ಉಜಿರೆಯಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಸಮ್ಮೇಳನಕ್ಕೆ ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಹಲವು ಮಂದಿ ಭಾಗಿಯಾಗಿದ್ದರು. ಸಂಘದ ವತಿಯಿಂದ ಅಧ್ಯಕ್ಷ ಅನಂತ್ ಊರುಬೈಲ್ ರವರ ನೇತೃತ್ವದಲ್ಲಿ ಸಂಪಾಜೆ ಮತ್ತು ಚೆಂಬು ಭಾಗದಿಂದ ರಬ್ಬರ್ ಬೆಳೆಗಾರರು ಭಾಗವಹಿಸಿದ್ದರು. ಸಂಪಾಜೆ ಗ್ರಾಪಂ ಸದಸ್ಯೆ ಶ್ರೀಮತಿ ರಮಾದೇವಿ ಕಳಗಿ, ಚೆಂಬು ಗ್ರಾ ಪಂ ಅಧ್ಯಕ್ಷ ತೀರ್ಥರಾಮ ಪಿ.ಜಿ., ಸೊಸೈಟಿ ಉಪಾಧ್ಯಕ್ಷ ಯಶವಂತ ಡಿ. ಡಿ., ಸಿಇಒ ಆನಂದ ಬಿ.ಕೆ. ಮೊದಲಾದವರು ಭಾಗವಹಿಸಿದ್ದರು.

























