ಫುಟ್ಬಾಲ್ ಕೇವಲ ಕಾಲಿನ ಆಟವಲ್ಲ ಮನಸ್ಸಿನ ಮತ್ತು ಮೆದುಳಿನ ಆಟ -. ಅರುಣ್ ಕುಮಾರ್
ಬ್ರಹ್ಮಗಿರಿ ಸಹೋದಯ ಒಕ್ಕೂಟ ಕೊಡಗು ಇದರ ಸಹಯೋಗದೊಂದಿಗೆ ಕೆ.ವಿ.ಜಿ. ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅಂತರ್ ಶಾಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಡಿ.08ರಂದು ಆಯೋಜಿಸಲಾಯಿತು. ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ಪಂದ್ಯಾವಳಿಯ ನಿರ್ಣಾಯಕರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ರವರು ದೀಪ ಪ್ರಜ್ವಲನೆಯೊಂದಿಗೆ ಈ ಪಂದ್ಯಾವಳಿಗೆ ಚಾಲನೆಯನ್ನು ನೀಡಿದರು. ಸ್ಪರ್ಧಾಳುಗಳನ್ನು ಕುರಿತು ಮಾತನಾಡಿದ ಅವರು, ” ಫುಟ್ಬಾಲ್ ಕೇವಲ ಕಾಲಿನ ಆಟವಲ್ಲ, ಮನಸ್ಸಿನ ಮತ್ತು ಮೆದುಳಿನ ಆಟ. ಇದರಲ್ಲಿ ಸ್ಪರ್ಧೆಗಿಂತ ಮಿಗಿಲಾಗಿ ಉತ್ಸಾಹವನ್ನು ಮತ್ತು ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸುವ ವೇದಿಕೆ ಇದಾಗಿದೆ. ಎನ್ನುವ ಮೂಲಕ ಎಲ್ಲಾ ಸ್ಪರ್ಧಾಳುಗಳಿಗೂ ಶುಭ ಹಾರೈಸಿದರು. ಫುಟ್ಬಾಲ್ ಪಂದ್ಯಾವಳಿಗೆ ಶಾಲೆಯ ಸಂಚಾಲಕರಾದ ಡಾ. ರೇಣುಕಾ ಪ್ರಸಾದ್ ಕೆ.ವಿ. ಯವರು ಶುಭ ಹಾರೈಸಿದರು








ಈ ಪಂದ್ಯಾವಳಿಯ ನಿರ್ಣಾಯಕರಾಗಿ ಹಾಝತುಲ್ ಕರ್ರಾರ್, ಮೊಹಮ್ಮದ್ ಸಫ, ಅಬ್ದುಲ್ ರವೂಫ್ (ಉಡುಪಿ ಫುಟ್ಬಾಲ್ ಅಸೋಸಿಯೇಷನ್ ), ಡಾ. ರಾಜೇಶ್ (ತಮಿಳುನಾಡು ಫುಟ್ಬಾಲ್ ಎಸೋಸಿಯೇಷನ್ ) ಇವರು ಸಹಕರಿಸಿದರು. ಈ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಅಂಕುರ್ ಶಾಲೆ, ಪ್ರಥಮ ಸ್ಥಾನವನ್ನು ಮತ್ತು ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಜೂನಿಯರ್ ವಿಭಾಗದಲ್ಲಿ ಅಂಕುರ್ ಶಾಲೆ, ಪ್ರಥಮ ಮತ್ತು ಎಸ್. ಎಂ.ಎಸ್ ಅಕಾಡೆಮಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಈ ಪಂದ್ಯಾಟದ ಸೀನಿಯರ್ ವಿಭಾಗದಲ್ಲಿ “ಬೆಸ್ಟ್ ಗೋಲ್ ಕೀಪರ್” ಆಗಿ ಅಂಕುರ್ ಶಾಲೆಯ ಯೋಹಾನ್ ಮುತ್ತಣ್ಣ ಮತ್ತು ಜೂನಿಯರ್ ವಿಭಾಗದಲ್ಲಿ ಆಯುಷ್ ಪಡೆದುಕೊಂಡರು. ಸೀನಿಯರ್ ವಿಭಾಗದಲ್ಲಿ “ಬೆಸ್ಟ್ ಡಿಫೆಂಡರ್” ಆಗಿ ಕೆ. ವಿ.ಜಿ ಇಂಟರ್ ನ್ಯಾ ಷನಲ್ ಪಬ್ಲಿಕ್ ಸ್ಕೂಲ್ ನ ಸಲ್ಮಾನುಲ್ ಫಾರೀಸ್ ಮತ್ತು ಜೂನಿಯರ್ ವಿಭಾಗದಲ್ಲಿ ಅಂಕುರ್ ಶಾಲೆಯ ಸುಹಾಸ್ ಪಡೆದುಕೊಂಡರು. ಸೀನಿಯರ್ ವಿಭಾಗದ “ಉತ್ತಮ ಆಟಗಾರ ಪ್ರಶಸ್ತಿ”ಯನ್ನು ಎಸ್ಎಮ್ಎಸ್ ಅಕಾಡೆಮಿಯ ಲುಕ್ ಮನ್ ಮತ್ತು ಜೂನಿಯರ್ ವಿಭಾಗದಲ್ಲಿ ಅಂಕುರ್ ಶಾಲೆಯ ಸಿಯಾನ್ ಪಡೆದುಕೊಂಡರು.
ಮನ್ವಿತ ಮತ್ತು ಸ್ಕಂದ ದಿಯ ಕಲ್ಲಾಜೆ ಪಂದ್ಯಾವಳಿಯ ನಿರೂಪಣೆ ಮಾಡಿದರು. ಮುನೀರ್ ಸ್ವಾಗತಿಸಿದರು, ದೀಕ್ಷಿತ್ ವಂದಿಸಿದರು. 9 ಮತ್ತು 10ನೆಯ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಈ ಪಂದ್ಯಾವಳಿಯ ಸಂಪೂರ್ಣ ಯಶಸ್ವಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಶಾಂತ್ ಪಿ ಡಿ ಮತ್ತು ಶ್ರೀಮತಿ ಆಶಾ ಜ್ಯೋತಿ ಹಾಗೂ ಶಾಲೆಯ ಶಿಕ್ಷಕರು, ಶಿಕ್ಷಕೇತರ ವೃಂದದವರು ಸಹಕರಿಸಿದರು.










