Home Uncategorized ರಾಜ್ಯ ಮಟ್ಟದ ಪ್ರಶಸ್ತಿಗೆ ಪೂರ್ಣಿಮಾ ಪೆರ್ಲ0ಪಾಡಿ ಆಯ್ಕೆ

ರಾಜ್ಯ ಮಟ್ಟದ ಪ್ರಶಸ್ತಿಗೆ ಪೂರ್ಣಿಮಾ ಪೆರ್ಲ0ಪಾಡಿ ಆಯ್ಕೆ

0

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲ0ಪಾಡಿ 2 ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ಪೆರ್ಲ0ಪಾಡಿ ಯವರಿಗೆ ಶಿಕ್ಷಣ ಜ್ಞಾನ ರಾಜ್ಯಮಟ್ಟದ ಸಮಾವೇಶದಲ್ಲಿ ದಿನಾಂಕ 21.12.2025ರಂದು ಹಾಸನದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯಮಟ್ಟದ ” ಜ್ಞಾನ ಚಿಗುರು ಕವಚ ” ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಸಸ್ತಿಗೆ ಆಯ್ಕೆಯಾದ ಏಕೈಕ ಅಂಗನವಾಡಿ ಕಾರ್ಯಕರ್ತೆಯಾಗಿ ರುತ್ತಾರೆ.
ಇವರು ಅಂತರಾಷ್ಟ್ರೀಯ ಸಂಸ್ಥೆಯ ಬೆಳ್ಳಾರೆ ಜೇಸಿಸ್ ನ 2026ರ ನಿಯೋಜಿತ ಅಧ್ಯಕ್ಷೆ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಮಹಿಳಾ ಪ್ರತಿನಿಧಿ, ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ 18ಕ್ಕಿಂತಲೂ ಹೆಚ್ಚು ಗೌರವ ಹಾಗೂ ಪ್ರಶಸ್ತಿಗಳು ಲಭಿಸಿದೆ.

NO COMMENTS

error: Content is protected !!
Breaking