













ಆಲೆಟ್ಟಿ ಗ್ರಾಮದ ಬಡ್ಡಡ್ಕ ಆಡಿಂಜ ನಿವಾಸಿ ಬಾಲಕೃಷ್ಣ ಗೌಡ ರವರ ಪುತ್ರಿ ಕು.ಶರಣ್ಯ ರವರು ಮಂಗಳೂರಿನ ಖಾಸಗಿಆಸ್ಪತ್ರೆಯಲ್ಲಿ ಫೆ. 24 ರಂದು ನಿಧನರಾದರು. ಅವರಿಗೆ 28 ವರ್ಷ ವಯಸ್ಸಾಗಿತ್ತು.
ಮೃತ ಯುವತಿಗೆ ಅಸೌಖ್ಯ ಕಾಣಿಸಿಕೊಂಡಿದ್ದು ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಏರು ಪೇರು ಕಾಣಿಸಿಕೊಂಡ ಹಿನ್ನಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಮೂರು ದಿನದ ಹಿಂದೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆ. 24 ರಂದುಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ. ಮೃತರು ತಂದೆ ಬಾಲಕೃಷ್ಣ ಗೌಡ ಆಡಿಂಜ, ತಾಯಿ ಹೊನ್ನಮ್ಮ , ಸಹೋದರ ಶರತ್ ಆಡಿಂಜ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಕಳೆದ ಎರಡು ವರ್ಷಗಳಿಂದ ಆಲೆಟ್ಟಿ ಗ್ರಾಮ ಪಂಚಾಯತ್ ನಲ್ಲಿ ಉದ್ಯೋಗಿಯಾಗಿದ್ದರು.







