ಸುಳ್ಯ : ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್

0

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್, ಆರೋಗ್ಯ ಇಲಾಖೆ ಮತ್ತು ವಿಕಲ ಚೇತನರ ಇಲಾಖೆಯ ಜಂಟಿ ಆಶ್ರಯದಲ್ಲಿ ಫೆ. 24 ರಂದು ನಡೆಯಿತು.

ತಾಲೂಕು ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಮೇಲ್ವಿಚಾರಕರಾದ ಎಂ.ಆರ್ ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲಚೇತನರ ಇಲಾಖೆಯ ಮೇಲ್ವಿಚಾರಕರಾದ ಯುಆರ್ ಡಬ್ಲ್ಯೂ ಪ್ರವೀಣ್ ನಾಯಕ್ ಇತರ ಪಂಚಾಯತ್ ಗಳ ವಿಕಲಚೇತನ ಇಲಾಖೆಯ ಮೇಲ್ವಿಚಾರಕ ವಿಆರ್ ಡಬ್ಲ್ಯೂ ರವರಾದ ಸದಾನಂದ, ಭವ್ಯ, ಕಾವೇರಿ, ಕೃಷ್ಣ ಪ್ರಸಾದ್, ಉಮಾವತಿ, ಪುಷ್ಪಶ್ರೀ, ಷಣ್ಮುಖ, ಪುಟ್ಟಣ್ಣ ವಿ, ಉಮ್ಮರ್, ದಾದಿ ನಯನ, ಶಿಕ್ಷಣ ಇಲಾಖೆಯ ಬಿ ಆರ್ ಸಿ ಯ ಶಶಿಕಲಾ ಹಾಜರಿದ್ದರು. ಸಮುದಾಯದ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ. ನವೀನ್ ರವರ ನೇತ್ರತ್ವದಲ್ಲಿ ತಜ್ಞ ವೈದ್ಯರು ಸಹಕಾರ ನೀಡಿದರು.