













ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮಾ. 24ರಂದು ಮೊದಲ್ಗೊಂಡು ಎ. 2ರ ತನಕ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಗಣಪತಿ ಹೋಮ ಮತ್ತು ಗೊನೆಮುಹೂರ್ತ
ಮಾ. 24ರಂದು ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಾನಡ್ಕ, ಪ್ರಶಾಂತ್ ಕೋಡಿಬೈಲು,
ವಿಶ್ವನಾಥ ಪೂಜಾರಿಮನೆ, ಮಹೇಶ್ ನಾಳ, ಕುಸುಮಾವತಿ ಪರಮಲೆ, ಮಾಗಣೆ ಗೌಡರಾದ ಉದಯಕುಮಾರ್ ಬಾನಡ್ಕ, ಕಚೇರಿ ಗುಮಾಸ್ತರಾದ ನಾಗರಾಜ ನೆಕ್ರಾಜೆ, ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಎ.ಎಸ್. ಸೇರಿದಂತೆ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾ. 27ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ಗಂಟೆ 6 ರಿಂದ ಭಜನೆ, ಸಂಜೆ 7 ಗಂಟೆಯಿಂದ ರಂಗಪೂಜೆ, ಬಳಿಕ ಶ್ರೀ ಭೂತಬಲಿ ಉತ್ಸವ, ವಸಂತಕಟ್ಟೆ ಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಮಾ. 28ರಂದು ಬೆಳಿಗ್ಗೆ 9ರಿಂದ ಮಹಾಗಣಪತಿ ಹೋಮ, ಕಲಶಪೂಜೆ, ಶ್ರೀ ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ಪ್ರಸಾದ ವಿತರಣೆ, ವೈದಿಕ ಕಾರ್ಯಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ ದೈವಸ್ಥಾನದಲ್ಲಿ ಮಾ. 29ರಂದು ಸಂಜೆ ಗಂಟೆ 6ರಿಂದ ಉಗ್ರಾಣ ತುಂಬಿಸುವುದು, ರಾತ್ರಿ 9ರಿಂದ ಉಳ್ಳಾಕುಲು ವಗೈರೆ ದೈವಗಳ ನೇಮ. ಮಾ. 30ರಂದು ರಾತ್ರಿ 8 ಗಂಟೆಯಿಂದ ಉಳ್ಳಾಳ್ತಿ ವಗೈರೆ ದೈವಗಳ ನೇಮ. ಮಾ. 31ರಂದು ಸಂಜೆ 7 ಗಂಟೆಯಿಂದ ಭಂಡಾರ ಬಂದು ಉಡ್ಡೋತ್ತಾರು-ಕುಮಾರ ದೈವಗಳ ನೇಮ. ಎ. 1ರಂದು ಬೆಳಿಗ್ಗೆ 6 ಗಂಟೆಯಿಂದ ಶ್ರೀ ಬಚ್ಚನಾಯಕ ದೈವದ ನೇಮ ಬಳಿಕ ಕೋಟಿನಾಯಕ ದೈವದ ನೇಮ. ರಾತ್ರಿ 8ರಿಂದ ಪ್ರಧಾನಿ ವಗೈರೆ ದೈವಗಳ ನೇಮ ಬಳಿಕ ಭಂಡಾರ ಹೊರಡುವುದು. ಎ. 2ರಂದು ರಾತ್ರಿ 8ರಿಂದ ಗುಳಿಗ ದೈವದ ನೇಮ ನಡೆಯಲಿದೆ. ಮಾ. 31ರಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಾತ್ರಿ 9 ರಿಂದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಿಯಾ ಮ್ಯೂಸಿಕಲ್ಸ್ ಪುತ್ತೂರು, ಗುರುಪ್ರಿಯಾ ಕಾಮತ್ ಮತ್ತು ತಂಡದಿಂದ ಗಾನಾಮೃತ – 2026 ಆರ್ಕೆಸ್ಟ್ರಾ ನಡೆಯಲಿದೆ. ಎ. 21ರಂದು ದೇವರ ಪ್ರತಿಷ್ಠಾ ದಿವಸ ನಡೆಯಲಿದ್ದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 7.30ಕ್ಕೆ ರಂಗಪೂಜೆ ಪ್ರಸಾದ ವಿತರಣೆ ನಡೆಯಲಿದೆ.







