ಮಡಿಕೇರಿಯಿಂದ ಸುಳ್ಯ ಕಡೆಗೆ ಹೊರಟಿದ್ದ ಕೆಎಸ್ಆರ್ ಟಿಸಿ ಬಸ್
ತಪ್ಪಿದ ಭಾರೀ ದುರಂತ














ಮಡಿಕೇರಿಯಿಂದ ಸುಳ್ಯಕ್ಕೆ ಹೊರಟಿದ್ದ ಕೆ ಎಸ್ ಆರ್ ಟಿ ಸಿ ಬಸ್ ಮಡಿಕೇರಿ ಬಸ್ ನಿಲ್ದಾಣದಲ್ಲೇ ಬ್ರೇಕ್ ವಿಫಲಗೊಂಡು ನಿಲ್ದಾಣದ ಕಂಬಕ್ಕೆ ಡಿಕ್ಕಿಯಾಗಿ ನಿಂತ ಘಟನೆ ಮಾ. 30 ರಂದು ಸಂಜೆ ನಡೆದಿದೆ.
ಈ ಘಟನೆ ಸಂಭವಿಸುವ ಸಂದರ್ಭ ಅಲ್ಲಿ ಕಂಬ ಇಲ್ಲದೇ ಹೋಗಿದ್ದಿದ್ದರೆ ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿತ್ತು.
ಅಲ್ಲದೆ ಬಸ್ ಚಾಲನೆಯ ಸಂದರ್ಭ ಘಾಟಿಯಲ್ಲಿ ಘಟನೆ ಸಂಭವಿಸಿದಲ್ಲಿ ಬಾರಿ ಅನಾಹುತ ಉಂಟಾಗುತ್ತಿತ್ತು.ಬಸ್ ಗಳ ಸಮರ್ಪಕ ನಿರ್ವಹಣೆ ಕೊರತೆ ಇಂಥಹ ಘಟನೆಗೆ ಕಾರಣ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.







