ಹಣೆಗೆ ತಿಲಕ ಹಚ್ಚಿದರೆ ಶರೀರಕ್ಕೆ ಸ್ಪೂರ್ತಿ – ಯೋಗ ಶಿಕ್ಷಕ ಗಣಪಯ್ಯ ವನಶ್ರೀ














ನಮ್ಮ ದೇಶದ ಸಂಸ್ಕೃತಿಯು ಮರೆಮಾಚಿ ಪಾಶ್ಚಾತ್ಯ ಸಂಸ್ಕೃತಿಯ ಒಲವು ಹೆಚ್ಚಾಗುತ್ತಿದೆ. ಹಣೆಗೆ ತಿಲಕ ಹಚ್ಚುವುದು ಕೆಲವರಿಗೆ ಮೂಢ ನಂಬಿಕೆಯಾಗಿರಬಹುದು. ಆದರೆ ಕುಂಕುಮ ಹಣೆಗೆ ಹಚ್ಚುವುದರಿಂದ ಶರೀರದ ಎಲ್ಲಾ ಭಾಗಗಳಿಗೆ ಸ್ಪೂರ್ತಿ ಯನ್ನು ನೀಡುತ್ತದೆ ಎಂದು ಬೆಳ್ಳಾರೆ ಪತಂಜಲಿ ಯೋಗ ಕೇಂದ್ರದ ಯೋಗ ಶಿಕ್ಷಕ, ಕೋಟೆ ಫೌಂಡೇಶನ್ ನ ಗಣಪಯ್ಯ ವನಶ್ರೀಯವರು ಹೇಳಿದರು.
ಅವರು ಎ. 9ರಂದು ಶೇಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಳ್ತಿಗೆ- ಪೆರ್ಲಂಪಾಡಿ ಮರಾಟಿ ಸಮಾಜ ಸೇವಾ ಸಂಘ ಗ್ರಾಮ ಸಮಿತಿ ವತಿಯಿಂದ ನಡೆದ 5ನೇ ವರ್ಷದ ಬೇಸಿಗೆ ಶಿಬಿರ ‘ ಚಿನ್ನರ ಚಿಲುಮೆ ಯನ್ನು ಉದ್ಘಾಟಿಸಿ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಶಾಂತ್ ಪಾಡಾಜೆ ವಹಿಸಿದ್ದರು. ವೇದಿಕೆಯಲ್ಲಿ ಕೊಳ್ತಿಗೆ ಮರಾಟಿ ಸಮಾಜ ಸೇವಾ ಸಂಘದ ಗ್ರಾಮ ಸಮಿತಿಯ ಅಧ್ಯಕ್ಷ ಸುಬ್ಬಯ್ಯ ಕೆ., ಉದ್ಯಮಿ ಹರಿಪ್ರಸಾದ್ ರೈ ಶೇಣಿ, ಶಾಲಾ ತೋಟಗಾರಿಕಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಶೇಣಿ, ಶಾಲಾ ಮುಖ್ಯ ಶಿಕ್ಷಕ ವಿನಯ್ ಪ್ರಸಾದ್ ಟಿ. ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಶ್ರೀಮತಿ ಭವ್ಯ ಕಾರ್ಯಕ್ರಮ ನಿರೂಪಿಸಿದರು. ಕೊಳ್ತಿಗೆ ಮರಾಟಿ ಸಮಾಜ ಸೇವಾ ಸಂಘದ ಗ್ರಾಮ ಸಮಿತಿಯ ಕಾರ್ಯದರ್ಶಿ ಜಗನ್ನಾಥ ಮಾಲೆತ್ತೋಡಿ ಸ್ವಾಗತಿಸಿ, ಸಹ ಶಿಕ್ಷಕ ಪ್ರಭಾಕರ ವಂದಿಸಿದರು.
ಎ.9ರಿಂದ ಎ.12ರ ವರೆಗೆ ನಡೆಯುವ ಶಿಬಿರದಲ್ಲಿ ಪ್ರತಿ ದಿನ ಮಕ್ಕಳಿಗೆ ಯೋಗ ತರಬೇತಿಯನ್ನು ಗಣಪಯ್ಯ ವನಶ್ರೀ, ರಂಗ ತರಬೇತಿಯನ್ನು ಕೃಷ್ಣಪ್ಪ ಬಂಬಿಲ, ಕ್ಲೇ ಮಾಡೆಲ್ ಶಿವರಾಮ ಕಲ್ಮಡ್ಕ, ಕ್ರಾಪ್ಟ್ ತರಬೇತಿಯನ್ನು ಉಮೇಶ್ ಕಾಪಡ್ಕ, ರಂಗ ತರಬೇತಿಯನ್ನು ರಾಕೇಶ್ ಹಾಗೂ ಮೊಬೈಲ್ ಬಳಕೆಯಿಂದ ಒಳಿತು ಕೆಡಕುಗಳ ಬಗ್ಗೆ ತಿಮ್ಮಪ್ಪ ಕೊಡ್ಲಾಡಿ ನೀಡುತ್ತಿದ್ದಾರೆ.







