













೨೦೧೯ರಲ್ಲಿ ಪ್ರಕಟವಾದ ಹಿರಿಯ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲರ ಆತ್ಮ ಕಥನ ಬೊಗಸೆ ತುಂಬಾ ಕನಸು ಕೃತಿಯ ನಾಲ್ಕನೆಯ ಸುಧಾರಿತ ಆವೃತ್ತಿ ಸಧ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
೨೦೨೦ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಈ ಆತ್ಮಕಥನದ ಮೊದಲಿನ ಎರಡು ಆವೃತ್ತಿಗಳನ್ನು ಮೈಸೂರಿನ ರಾಜ್ ಪ್ರಕಾಶನದವರು ಹೊರ ತಂದಿದ್ದರು. ೨೦೨೫ರಲ್ಲಿ ಬೊಗಸೆಯ ಮೂರನೆಯ ಆವೃತ್ತಿ ಕಾರ್ಕಳದ ಪುಸ್ತಕಮನೆ ಪ್ರಕಾಶನದಿಂದ ಹೊರ ಬಂತು. ಇದೀಗ ನಾಲ್ಕನೇ ಆವೃತ್ತಿಯನ್ನು ಇದೇ ಪ್ರಕಾಶನ ಈ ಜೂನ್ನಲ್ಲಿ ಹೊರತರಲಿದೆ.
ಬೊಗಸೆಯ ೪೫೦೦ ಪ್ರತಿಗಳು ಈಗಾಗಲೇ ಮಾರಾಟವಾಗಿದೆ. ಇದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಸಂಕಲಿಸಿ ಕಾಸರಗೋಡಿನ ನಿವೃತ್ತ ಪ್ರಾಂಶುಪಾಲ ಡಾ. ಶಂಕರ ಪಾಟಾಳಿ ಏತಡ್ಕ ಬೊಗಸೆ ತುಂಬಿದ ಕನಸಿನ ಕುರಿತು ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ.







